Webdunia - Bharat's app for daily news and videos

Install App

IND vs ENG: ಇಂಗ್ಲೆಂಡ್ ನೆಲದಲ್ಲಿ ದಾಖಲೆ ಮಾಡಿದ ಕೆಎಲ್ ರಾಹುಲ್

Krishnaveni K
ಬುಧವಾರ, 23 ಜುಲೈ 2025 (16:57 IST)
ಓಲ್ಡ್ ಟ್ರಾಫರ್ಡ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.

ಇಂದು ಇಂಗ್ಲೆಂಡ್ ಮತ್ತೆ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗಿಳಿಸಿತು. ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಭಾರತ ವಿಕೆಟ್ ನಷ್ಟವಿಲ್ಲದೇ 52 ರನ್ ಗಳಿಸಿದೆ.

ಕೆಎಲ್ ರಾಹುಲ್ 32 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದು 11 ರನ್ ಪೂರ್ತಿ ಮಾಡಿದೊಡನೆ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ಹೊಸ ಇತಿಹಾಸ ಬರೆದರು. ಭಾರತದ ಪರ ಇಂಗ್ಲೆಂಡ್ ನಲ್ಲಿ ಟೆಸ್ಟ್ ಮಾದರಿಯಲ್ಲಿ 1000 ರನ್ ಪೂರೈಸಿದ ಐದನೇ ಆಟಗಾರ ಎನಿಸಿಕೊಂಡರು.

ಇದಕ್ಕೆ ಮೊದಲು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ರಾಹುಲ್ ಐದನೆಯವರಾಗಿ ಈ ವಿಶೇಷ ಪಟ್ಟಿಗೆ ಸೇರ್ಪಡೆಯಾದರು. ಅಲ್ಲದೆ ಈ ಸರಣಿಯಲ್ಲಿ ಅವರು 400 ರನ್ ಪೂರೈಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಡಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಡಬಲ್ಸ್‌ ಆಟಗಾರ್ತಿಯರ ಚಾರಿತ್ರಿಕ ಸಾಧನೆ

IND vs SL: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮುಂದಿನ ಟೆಸ್ಟ್ ಯಾವಾಗ, ಸಮಯ, ಲೈವ್ ಸ್ಟ್ರೀಮಿಂಗ್ ಡೀಟೈಲ್ ಇಲ್ಲಿದೆ

IND vs SL: ಟೀಂ ಇಂಡಿಯಾಗೆ ಲಂಕಾ ಎದುರು ಭರ್ಜರಿ ಜಯ: ಕನ್ನಡಿಗೆ ಸಿಕ್ತು ಬಂಪರ್

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಮುಂದಿನ ಸುದ್ದಿ
Show comments