IND vs ENG: ಟಾಸ್ ಗೆದ್ದ ಇಂಗ್ಲೆಂಡ್, ದೇವದತ್ ಪಡಿಕ್ಕಲ್ ಡೆಬ್ಯೂಟ್

Krishnaveni K
ಗುರುವಾರ, 7 ಮಾರ್ಚ್ 2024 (09:15 IST)
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯದ ಮೂಲಕ ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ ಮಾಡಿದ್ದಾರೆ.

ಈ ಪಂದ್ಯಕ್ಕೆ ಟೀಂ ಇಂಡಿಯಾ ಎರಡು ಬದಲಾವಣೆ ಮಾಡಿಕೊಂಡಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಪುನರಾಗಮನ ಮಾಡಿರುವುದರಿಂದ ಕಳೆದ ಪಂದ್ಯದಲ್ಲಿ ಮೊದಲ ಬಾರಿಗೆ ಆಡಿದ್ದ ಆಕಾಶ್ ದೀಪ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅಲ್ಲದೆ, ಕಳೆದ ಮೂರು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಯೂ ಬಳಸಿಕೊಳ್ಳದ ರಜತ್ ಪಾಟೀದಾರ್ ನಿರೀಕ್ಷೆಯಂತೇ ಹೊರಗುಳಿದಿದ್ದಾರೆ. ಅವರಿಗೆ ಗಾಯವಾಗಿದೆ ಎಂದು ರೋಹಿತ್ ಶರ್ಮಾ ಅಪ್ ಡೇಟ್ ನೀಡಿದ್ದಾರೆ. ಅವರ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ಗೆ ಅವಕಾಶ ಸಿಕ್ಕಿದೆ. ಈ ಮೂಲಕ ಈ ಸರಣಿಯಲ್ಲಿ ಪದಾರ್ಪಣೆ ಮಾಡಿದ ಐದನೇ ಆಟಗಾರರಾಗಿದ್ದಾರೆ. ರವಿಚಂದ್ರನ್ ಅಶ್ವಿನ್ ಗೆ ಇದು 100 ನೇ ಟೆಸ್ಟ್ ಪಂದ್ಯ.

ಇತ್ತ ಇಂಗ್ಲೆಂಡ್ ಕೂಡಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡದ ಪರ ಜಾನಿ ಬೇರ್ ಸ್ಟೋ ಕೂಡಾ ಇಂದು 100 ನೇ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಇಂಗ್ಲೆಂಡ್ ಪರ ಮಾರ್ಕ್ ವುಡ್ ಆಡುತ್ತಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್,  ಶುಬ್ಮನ್ ಗಿಲ್, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್,  ಕುಲದೀಪ್ ಯಾದವ್.

ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾವ್ಲೇ, ಡೆನ್ ಬಕೆಟ್, ಒಲಿ ಪಾಪ್,  ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೇರ್ ಸ್ಟೋ, ಬೆನ್ ಫೋಕ್ಸ್ (ವಿ.ಕೀ.), ಟಾಮ್ ಹಾರ್ಟ್ಲೀ, ಶೊಯೇಬ್ ಬಾಶಿರ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕುಲದೀಪ್ ಯಾದವ್ ಜೊತೆಗೆ ಉಜ್ಜೈನಿ ಮಹಾಕಾಳನ ದರ್ಶನ ಪಡೆದ ವಿರಾಟ್ ಕೊಹ್ಲಿ Video

WPL 2026: ಆರ್ ಸಿಬಿ ವನಿತೆಯರು ಈಗ ನಂ1, ಇಂದು ಮತ್ತೊಂದು ಪಂದ್ಯ

WPL 2026: ಶ್ರೇಯಾಂಕ ಪಾಟೀಲ್‌ ಕೈಚಳಕ, ರಾಧಾ ಯಾದವ್‌ ಅಬ್ಬರ: ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮ

WPL 2026: ಆರ್ ಸಿಬಿ ಕೈ ಹಿಡಿದ ರಾಧಾ ಯಾದವ್, ರಿಚಾ ಘೋಷ್

RCB vs GT: ಟಾಸ್ ಸೋತ ಆರ್‌ಸಿಬಿ, ಮೊದಲು ಬ್ಯಾಟಿಂಗ್

ಮುಂದಿನ ಸುದ್ದಿ
Show comments