IND vs BAN Test: ಮಗನ ಇನಿಂಗ್ಸ್ ನೋಡಲು ಬಂದ ತಂದೆಗೆ ನಿರಾಸೆ ಮಾಡದ ರವಿಚಂದ್ರನ್ ಅಶ್ವಿನ್

Krishnaveni K
ಗುರುವಾರ, 19 ಸೆಪ್ಟಂಬರ್ 2024 (17:19 IST)
Photo Credit: X
ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಗ್ರ ಕ್ರಮಾಂಕ ಕೈಕೊಟ್ಟಾಗ ತಂಡವನ್ನು ಹಿಡಿದೆತ್ತಿದ್ದು ಲೋಕಲ್ ಬಾಯ್ ರವಿಚಂದ್ರನ್ ಅಶ್ವಿನ್ ಮತ್ತು ಅವರ ಸ್ಪಿನ್ ಸಾಥ್ ರವೀಂದ್ರ ಜಡೇಜಾ. ಈ ಪೈಕಿ ಅಶ್ವಿನ್ ಶತಕದ ಇನಿಂಗ್ಸ್ ಆಡಿದರೆ ಜಡೇಜಾ ಶತಕದ ಅಂಚಿನಲ್ಲಿದ್ದಾರೆ.

ಮೊದಲ ದಿನದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿ ದಿನದಾಟ ಮುಗಿಸಿದೆ. ದಿನದ ಮೊದಲಾರ್ಧ ಸಂಪೂರ್ಣವಾಗಿ ಬಾಂಗ್ಲಾ ಬೌಲರ್ ಗಳದ್ದೇ ಪರಾಕ್ರಮವಾಗಿತ್ತು. ರೋಹಿತ್, ಕೊಹ್ಲಿ ತಲಾ 6, ಶುಬ್ಮನ್ ಗಿಲ್ 0, ಕೆಎಲ್ ರಾಹುಲ್ 12 ರನ್ ಗಳಿಸಲಷ್ಟೇ ಶಕ್ತರಾದರು.

ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್-ರಿಷಬ್ ಪಂತ್ ಜೋಡಿ ತಂಡಕ್ಕೆ ಕೊಂಚ ಚೇತರಿಕೆ ನೀಡಿತು. ಜೈಸ್ವಾಲ್ 118 ಎಸೆತಗಳಿಂದ 56 ರನ್ ಗಳಿಸಿ ಔಟಾದರೆ ರಿಷಬ್ ಪಂತ್ ಅವರಿಗೆ ಸಾಥ್ ನೀಡಿ 39 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 144 ರನ್ ಗಳಿಗೆ 6 ವಿಕೆಟ್ ಉದುರಿಸಿಕೊಂಡಿದ್ದ ಭಾರತಕ್ಕೆ ಆಸರೆಯಾಗಿದ್ದು ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಜೋಡಿ.

ಮೊದಲು ಸ್ಥಳೀಯ ಪ್ರತಿಭೆ ರವಿಚಂದ್ರನ್ ಅಶ್ವಿನ್ ರದ್ದೇ ಅಬ್ಬರವಿತ್ತು. ಬಳಿಕ ಅವರಿಗೆ ಜಡೇಜಾ ಸಾಥ್ ನೀಡಿದರು. ಒಟ್ಟು 112 ಎಸೆತ ಎದುರಿಸಿದ ಅಶ್ವಿನ್ 102 ರನ್ ಗಳಿಸಿ ಕ್ರೀಸ್ ನಲ್ಲಿದ್ದರೆ ಅವರಿಗೆ ಸಾಥ್ ನೀಡುತ್ತಿರುವ ಜಡೇಜಾ 86 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಬ್ಬರ ಶತಕದ ಜೊತೆಯಾಟದಿಂದಾಗಿ 200 ರ ಮೊತ್ತಕ್ಕೆ ಆಲೌಟ್ ಆಗಬೇಕಿದ್ದ ಭಾರತ ಮೊದಲ ದಿನ ಆಲೌಟ್ ಆಗದೇ 300 ರ ಗಡಿ ದಾಟುವಂತಾಯಿತು. ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಭಾರತ ರನ್ ಗತಿ ನಿಧಾನ ಮಾಡಿರಲಿಲ್ಲ ಎನ್ನುವುದು ವಿಶೇಷ.

ಇಂದು ಅಶ್ವಿನ್ ಬ್ಯಾಟಿಂಗ್ ನೋಡಲು ಅವರ ತಂದೆ ರವಿಚಂದ್ರನ್ ಮೈದಾನಕ್ಕೆ ಬಂದಿದ್ದರು. ಮಗನ ಬ್ಯಾಟಿಂಗ್ ನೋಡುತ್ತಾ ಫುಲ್ ಎಂಜಾಯ್ ಮಾಡುತ್ತಿದ್ದ ತಂದೆಗೆ ಅಶ್ವಿನ್ ಕೂಡಾ ನಿರಾಸೆ ಮಾಡಲಿಲ್ಲ. ಮನಮೋಹಕ ಹೊಡೆತಗಳ ಮೂಲಕ ಅಶ್ವಿನ್ ತವರಿನ ಪ್ರೇಕ್ಷಕರನ್ನು ಭರಪೂರ ರಂಜಿಸಿದರು.

ಅರ್ಧಶತಕ ಗಳಿಸುತ್ತಿದ್ದಂತೇ ಗೇರ್ ಬದಲಾಯಿಸಿದ ಜಡೇಜಾ ಕೂಡಾ ಕೆಲವು ಅದ್ಭುತ ಹೊಡೆತಗಳ ಮೂಲಕ ತಾವೇಕೆ ಆಲ್ ರೌಂಡರ್ ಎಂಬುದನ್ನು ನಿರೂಪಿಸಿದರು. ಇವರಿಬ್ಬರೂ ಇದೀಗ 195 ರನ್ ಗಳ ಜೊತೆಯಾಟ ನಿಭಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

Womens World Cup: ಭಾರತದ ವನಿತೆಯರಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

AUS vs IND ODI: ರೋಹಿತ್, ವಿರಾಟ್, ಶುಭಮನ್‌ ಪೆವಿಲಿಯನ್‌ ಪರೇಡ್‌: ಭಾರತಕ್ಕೆ ಆರಂಭಿಕ ಆಘಾತ

ಮುಂದಿನ ಸುದ್ದಿ
Show comments