Webdunia - Bharat's app for daily news and videos

Install App

IND vs AFG T20I: ಮತ್ತೆ ಭಾರತದ ಕೈ ಹಿಡಿದ ಯುವ ಕ್ರಿಕೆಟಿಗರು

Krishnaveni K
ಶುಕ್ರವಾರ, 12 ಜನವರಿ 2024 (08:40 IST)
ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಮುಕೇಶ್ ಕುಮಾರ್, ಅಕ್ಸರ್ ಪಟೇಲ್ ತಲಾ 2, ಶಿವಂ ದುಬೆ 1 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 17.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಕಂಡಿತು. ಭಾರತಕ್ಕೆ ಬಹಳ ದಿನಗಳ ನಂತರ ರೋಹಿತ್ ಶರ್ಮಾ ಪುನರಾಗಮನವಾದರೂ ಅವರು ಶೂನ್ಯಕ್ಕೇ ರನೌಟ್ ಆಗಿ ನಿರಾಸೆ ಮೂಡಿಸಿದರು.  ಒಂದು ಹಂತದಲ್ಲಿ 28 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಯುವ ಕ್ರಿಕೆಟಿಗರೇ ಭಾರತಕ್ಕೆ ಆಸರೆಯಾದರು.

ತಿಲಕ್ ವರ್ಮ-ಶಿವಂ ದುಬೆ ಜೋಡಿ ಭಾರತಕ್ಕೆ ಆಸರೆಯಾಯಿತು. ತಿಲಕ್ ವರ್ಮ 26 ರನ್ ಗಳಿಸಿ ಔಟಾದರು. ಶಿವಂ ದುಬೆ ಕೊನೆಯವರೆಗೂ ಅಜೇಯರಾಗುಳಿದು 60 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟಿಗ ಜಿತೇಶ್ ಶರ್ಮ 31 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಫಿನಿಶರ್ ಪಾತ್ರವನ್ನು ಮತ್ತೊಮ್ಮೆ ಅತ್ಯುತ್ತಮವಾಗಿ ನಿಭಾಯಿಸಿದ ರಿಂಕು ಸಿಂಗ್ 16 ರನ್ ಗಳಿಸಿ ಅಜೇಯರಾಗುಳಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs PBKS Match: ಪಡಿಕ್ಕಲ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌, ಕರೆತಂದ ಗುಟ್ಟು ಬಿಚ್ಚಿಟ್ಟ ಮೆಂಟರ್‌ ದಿನೇಶ್ ಕಾರ್ತಿಕ್

IPL 2025: ಸಮಾರೋಪ ಸಮಾರಂಭಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ

IPL 2025: ಫೈನಲ್‌ಗೆ ಲಗ್ಗೆಯಿಟ್ಟರೂ ಖುಷಿ ಕಾಣದ ಶ್ರೇಯಸ್ ಅಯ್ಯರ್, ಕಾರಣ ಇಲ್ಲಿದೆ

Norway Chess 2025 ಗುಕೇಶ್ ವಿರುದ್ಧ ಸೋಲು ಅನುಭವಿಸಿದ್ದ ಹಾಗೇ ಕಾರ್ಲ್‌ಸನ್ ಹೀಗ್ಯಾಕೆ ಮಾಡಿದ್ರು

ಸ್ಟಾರ್‌ ಆಲ್‌ರೌಂಡರ್‌ ಏಕದಿನ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಣೆ: ಸ್ವಾರ್ಥಕ್ಕಾಗಿ ಆಡಲ್ಲ ಎಂದಿದ್ಯಾಕೆ

ಮುಂದಿನ ಸುದ್ದಿ
Show comments