ದಕ್ಷಿಣ ಆಫ್ರಿಕಾ ತ್ರಿಕೋನ ಏಕ ದಿನ ಸರಣಿಯ 6 ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 139 ರನ್ ಜಯಗಳಿಸುವ ಮೂಲಕ ಇಮ್ರಾನ್ ತಾಹಿರ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆದಿದ್ದಾರೆ. 343ಕ್ಕೆ ನಾಲ್ಕು ವಿಕೆಟ್‌ಗಳ ಸದೃಢ ಮೊತ್ತವನ್ನು ಗಳಿಸಿದ ದ. ಆಫ್ರಿಕಾ ಪರ ಲೆಗ್ ಸ್ಪಿನ್ನರ್ 9 ಓವರುಗಳಲ್ಲಿ 45 ರನ್ ನೀಡಿ ಏಳು ವಿಕೆಟ್ ಕಬಳಿಸಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಅತ್ಯುತ್ತಮ ಸಾಧನೆಯೆನಿಸಿದೆ.
ತಾಹಿರ್ ತಮ್ಮ 58ನೇ ಪಂದ್ಯದಲ್ಲಿ ಮಾರ್ನ್ ಮಾರ್ಕೆಲ್ ಅವರ ಅತೀ ವೇಗದ 100 ಏಕದಿನ ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ಇದಕ್ಕೆ ಮುಂಚೆ ಹಷೀಮ್ ಆಮ್ಲಾ ಅವರ 110 ರನ್ ಶತಕ, ಕ್ವಿಂಟನ್ ಡಿ ಕಾಕ್ ಅವರ 71 ರನ್ ಮತ್ತು ಪ್ಲೆಸಿಸ್ 73 ರನ್ ನೆರವಿನಿಂದ ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 343 ರನ್ ಗಳಿಸಿತ್ತು.
ತಾಹಿಲ್ ಮತ್ತು ಶಾಮ್ಶಿ( 41ಕ್ಕೆ 2) ವೆಸ್ಟ್ ಇಂಡೀಸ್ ಬ್ಯಾಟಿಂಗ್ ಪತನಕ್ಕೆ ಕಾರಣರಾದರು. ತಾಹಿರ್ ದಾಖಲೆಯ ವಿಕೆಟ್ ಪತನ ಒಂದು ಓವರಿನಲ್ಲಿ ಮೂರು ವಿಕೆಟ್‌ಗಳಾಗಿದ್ದು, 38 ಓವರುಗಳಲ್ಲಿ ಆತಿಥೇಯರು 204 ರನ್‌ಗಳಿಗೆ ಆಲೌಟ್ ಆದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.