ಭಾರತದಲ್ಲಿ ಐಸಿಸಿ ವಿಶ್ವ ಟ್ವೆಂಟಿ 20 ಪಂದ್ಯದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಪಾಕಿಸ್ತಾನದ ಜತೆ ಕ್ರಿಕೆಟ್ ಬಾಂಧವ್ಯ ಆರಂಭಿಸುವ ಕುರಿತು ಮನದಟ್ಟು ಮಾಡಿದರು. ಖಾನ್ ಮೋದಿಯನ್ನು ಭೇಟಿ ಮಾಡಿ ಪಾಕ್ ಜತೆ ಕ್ರಿಕೆಟ್ ಸಂಬಂಧ ಮುಂದುವರಿಸುವ ವಿಷಯ ಕುರಿತು ಹೇಳಿದಾಗ, ಅದಕ್ಕೆ ಮೋದಿಯಿಂದ ಸಿಕ್ಕ ಉತ್ತರ ಮುಗುಳುನಗೆ.
ನಾನು ಮೊದಲ ಬಾರಿ ಅವರನ್ನು ಭೇಟಿ ಮಾಡಿದ್ದರಿಂದ ಕ್ರಿಕೆಟ್ ಸಂಬಂಧ ಆರಂಭಿಸಬೇಕೆಂದು ಮಾತ್ರ ಹೇಳಿದೆ. ಇದು ಎರಡನೇ ಭೇಟಿಯಾಗಿದ್ದರೆ ಇದೊಂದು ಅಪಕ್ವ ವಿದೇಶಾಂಗ ನೀತಿ ಎಂದು ಹೇಳುತ್ತಿದ್ದೆ ಎಂದು ಇಮ್ರಾನ್ ಸ್ಪಷ್ಟಪಡಿಸಿದರು.
ಈ ಬಿಕ್ಕಟ್ಟಿನ ಕುರಿತು ನಿರಾಶೆ ವ್ಯಕ್ತಪಡಿಸಿದ ಖಾನ್, ಎಲ್ಲಾ ಪಾಕಿಸ್ತಾನಿಯರನ್ನು ಈ ಘಟನೆಗೆ ಶಿಕ್ಷಿಸುವುದಕ್ಕೆ ಸಾಧ್ಯವಿಲ್ಲ ಎಂದರು. ಮಾಡಿರದ ತಪ್ಪಿಗಾಗಿ ಪಾಕಿಸ್ತಾನವನ್ನು ಶಿಕ್ಷಿಸುವುದು ತುಂಬಾ ಅಪಕ್ವ ನಿಲುವು. ಯಾವುದೇ ಮಾನವ ಹಕ್ಕುಗಳ ತತ್ವದಲ್ಲಿ ಸಾಮೂಹಿಕ ಶಿಕ್ಷೆಗೆ ಅನುಮತಿಯಿಲ್ಲ. ಪ್ರತಿಯೊಬ್ಬರೂ ಮುಂಬೈ ಮತ್ತು ಪಠಾಣ್‌ಕೋಟ್ ದಾಳಿಗಳನ್ನು ಖಂಡಿಸಿದ್ದಾರೆ.
ನಿಮಗಿಂತ ನಾವು ಹೆಚ್ಚು ಭಯೋತ್ಪಾದನೆ ದಾಳಿಗಳಿಂದ ನಲುಗಿದ್ದೇವೆ ಎನ್ನುವುದು ನೆನಪಿರಲಿ. ಭಯೋತ್ಪಾದನೆಯ ಕೆಟ್ಟ ಸ್ಥಿತಿಯಿಂದ ವಾಸ್ತವವಾಗಿ ನರಳುತ್ತಿರುವ ದೇಶವನ್ನು ನಿಂದಿಸಿ, ಸಾಮೂಹಿಕ ಶಿಕ್ಷೆ ನೀಡುವುದು ಅಪಕ್ವ ಧೋರಣೆ ಎಂದು ಇಮ್ರಾನ್ ಹೇಳಿದರು.
2007ರಿಂದೀಚೆಗೆ ಉಭಯ ರಾಷ್ಟ್ರಗಳು 2012/13ರಲ್ಲಿ ಪಾಕಿಸ್ತಾನ ಭಾರತ ಪ್ರವಾಸದಲ್ಲಿ ಮೂರು ಏಕದಿನಗಳು ಮತ್ತು ಎರಡು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಬಿಟ್ಟರೆ, ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.