ಐಸಿಸಿ ಏಕದಿನ ವಿಶ್ವಕಪ್ ಗೆ ಇಂದು ಚಾಲನೆ: ಸರಳವಾಗಿ ಉದ್ಘಾಟನೆ

Webdunia
ಗುರುವಾರ, 5 ಅಕ್ಟೋಬರ್ 2023 (08:30 IST)
ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್‍ ಕ್ರಿಕೆಟ್ ಗೆ ಇಂದಿನಿಂದ ಚಾಲನೆ ಸಿಗಲಿದೆ. ಇಂದು ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಇದೇ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿ ಕೂಟ ಆಯೋಜಿಸುತ್ತಿದೆ. 10 ತಂಡಗಳು ಕೂಟದಲ್ಲಿ ಭಾಗಿಯಾಗುತ್ತಿವೆ. ನವಂಬರ್ 19 ರಂದು ಅಹಮ್ಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಇಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಗೆದ್ದ ತಂಡ 33 ಕೋಟಿ ರೂ. ಬಹುಮಾನ ಮೊತ್ತ ಜೇಬಿಗಿಳಿಸಲಿದೆ. ರನ್ನರ್ ಅಪ್ ತಂಡಕ್ಕೆ 16 ಕೋಟಿ ರೂ. ಬಹುಮಾನ ಹಣ ಸಿಗಲಿದೆ. ಹೆಚ್ಚಿನ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತಿದೆ. ಅಹಮ್ಮದಾಬಾದ್, ಮುಂಬೈ, ಕೋಲ್ಕೊತ್ತಾ, ಧರ್ಮಶಾಲಾ, ಗುವಾಹಟಿ, ತಿರುವನಂತಪುರಂ, ಚೆನ್ನೈ, ಬೆಂಗಳೂರು, ಹೈದರಾಬಾದ್, ದೆಹಲಿ ಸೇರಿದಂತೆ ಭಾರತದ ವಿವಿಧ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಮತ್ತು ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB VS GT: ಕ್ವಾಲಿಫೈಯರ್‌ 1 ರೌಂಡ್‌ನಲ್ಲಿ ಟಾಸ್ ಸೋತ ಆರ್‌ಸಿಬಿ ಆರಂಭಿಕ ಆಘಾತ

GT VS RCB: ವಿರಾಟ್ ಕೊಹ್ಲಿ ಆರಂಭಿಕ ಆಟವೇ ಆರ್‌ಸಿಬಿ ಗೆಲುವಿಗೆ ಸುಗಮ

ವೈಭವ್ ಜೊತೆ ಫೋಟೋಗೆ ಪೋಸ್ ಕೊಡಿ ಎಂದ್ರೆ ನಾವೇನು ಫಿಲಂ ಸ್ಟಾರ್ ಅಲ್ಲ ಎಂದ ರಿಯಾನ್ ಪರಾಗ್ video

IPL 2026: ಕ್ವಾಲಿಫೈಯರ್ ಪಂದ್ಯಕ್ಕೆ ಮುನ್ನ ಆರ್ ಸಿಬಿ, ಗುಜರಾತ್ ಟೈಟನ್ಸ್ ಗೆ ಗುಡ್ ನ್ಯೂಸ್

ಪಡ್ಡೆ ಹುಡುಗರ ಕಾಟಕ್ಕೆ ಚಿಯರ್‌ ಲೀಡರ್‌ಗಳು ಫುಲ್ ಗರಂ' ಏಕಾನಾ ಸ್ಟೇಡಿಯಂನಲ್ಲಿ ಸುಂದರಿಯರು ಕೋಪಗೊಳ್ಳಲು ಕಾರಣವೇನು ಗೊತ್ತಾ, Video

ಮುಂದಿನ ಸುದ್ದಿ
Show comments