Select Your Language

Notifications

webdunia
webdunia
webdunia
webdunia

ಕ್ರಿಕೆಟಿಗರಿಗೆ ಹೊಸ ಹೆಲ್ಮೆಟ್ ನಿಯಮ ಜಾರಿ ಮಾಡಿದ ಐಸಿಸಿ, ತಪ್ಪಿದರೆ ನಿಷೇಧ ಭೀತಿ

ಕ್ರಿಕೆಟಿಗರಿಗೆ ಹೊಸ ಹೆಲ್ಮೆಟ್ ನಿಯಮ ಜಾರಿ ಮಾಡಿದ ಐಸಿಸಿ, ತಪ್ಪಿದರೆ ನಿಷೇಧ ಭೀತಿ
Dubai , ಸೋಮವಾರ, 16 ಜನವರಿ 2017 (10:37 IST)
ದುಬೈ: ಕ್ರಿಕೆಟಿಗರು ಆಗಾಗ ಮೈದಾನದಲ್ಲಿ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಆಟಗಾರರಿಗೆ ಹೊಸ ಹೆಲ್ಮೆಟ್ ನೀತಿ ಜಾರಿ ಮಾಡಲು ಉದ್ದೇಶಿಸಿದೆ.

ಈ ನಿಯಮವನ್ನು ಮುರಿದವರಿಗೆ ತಕ್ಕ ದಂಡ ವಿಧಿಸಲಿದೆ. ಇನ್ನು ಮುಂದೆ ಕ್ರಿಕೆಟಿಗರು ಧರಿಸುವ ಹೆಲ್ಮೆಟ್ ಬ್ರಿಟಿಷ್ ಗುಣಮಟ್ಟ ಬಿಎಸ್ 7928:2013 ರನ್ನು ತಲುಪಬೇಕು. ಇದನ್ನು ಈಗಾಗಲೇ ಇಂಗ್ಲೆಂಡ್ ಕ್ರಿಕೆಟಿಗರು ಪಾಲಿಸುತ್ತಿದ್ದಾರೆ.

ಒಂದು ವೇಳೆ ಈ ಗುಣಮಟ್ಟದ ಹೆಲ್ಮೆಟ್ ಧರಿಸದೇ ಕಣಕ್ಕಿಳಿದರೆ ತಕ್ಕ ಬೆಲೆ ತೆರಬೆಕಾದೀತು ಎಂದು ಐಸಿಸಿ ಎಚ್ಚರಿಸಿದೆ. ಫೆಬ್ರವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಎರಡು ಬಾರಿ ಆಟಗಾರರು ಹೆಲ್ಮೆಟ್ ನಿಯಮಾವಳಿ ಮುರಿದರೆ ದಂಡ ಮತ್ತು ಮೂರನೇ ಬಾರಿ ಮುರಿದರೆ ಒಂದು ಪಂದ್ಯದ ನಿಷೇಧ ಎದುರಿಸಬೇಕಾದೀತು ಎಂದು ಐಸಿಸಿ ಎಚ್ಚರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ನಿಂದ ಹತ್ತು ಪಟ್ಟು ತೆರಿಗೆ ವಸೂಲಿ ಮಾಡಿದರಂತೆ ಟೀಂ ಇಂಡಿಯಾ ಕ್ರಿಕೆಟಿಗರು!