Select Your Language

Notifications

webdunia
webdunia
webdunia
webdunia

ಟಿ-20 ವಿಶ್ವಕಪ್ ನೋಡಲು ಕಾಯುತ್ತಿದ್ದವರಿಗೆ ಐಸಿಸಿ ಶಾಕ್!

ಟಿ-20 ವಿಶ್ವಕಪ್
Dubai , ಸೋಮವಾರ, 19 ಜೂನ್ 2017 (10:35 IST)
ದುಬೈ: ಟಿ-20 ವಿಶ್ವಕಪ್ ಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. ಚುಟುಕು ಕ್ರಿಕೆಟ್ ಮಾದರಿಯನ್ನು ಇಷ್ಟಪಡುತ್ತಿರುವವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶಾಕ್ ನೀಡಿದೆ.

 
ಮುಂದಿನ ವರ್ಷ ಅಂದರೆ 2018 ರಲ್ಲಿ ಚುಟುಕು ಕ್ರಿಕೆಟ್ ವಿಶ್ವಕಪ್ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಟೂರ್ನಮೆಂಟ್ ನಡೆಸುವ ಸಮಯದಲ್ಲಿ ಎಲ್ಲಾ ದೇಶದ ಕ್ರಿಕೆಟ್ ತಂಡಗಳೂ ತಮ್ಮದೇ ಉಭಯ ಸರಣಿಗಳಲ್ಲಿ ಬ್ಯುಸಿಯಾಗಿರುವುದರಿಂದ ಟಿ-20 ವಿಶ್ವಕಪ್ ಆಯೋಜಿಸದಿರಲು ಐಸಿಸಿ ನಿರ್ಧರಿಸಿದೆ.

ಹಾಗಂತ ನಿರಾಶರಾಗಬೇಕಿಲ್ಲ. 2020 ರಲ್ಲಿ ವಿಶ್ವಕಪ್ ಪಂದ್ಯಾವಳಿ ಆಯೋಜಿಸಲಿರುವ ಐಸಿಸಿ ಯಾವ ರಾಷ್ಟ್ರ ಆತಿಥ್ಯ ವಹಿಸಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಸೂಚನೆ ನೀಡಿಲ್ಲ. ಐಸಿಸಿ ಮೂಲದ ಪ್ರಕಾರ, ಆಸ್ಟ್ರೇಲಿಯಾ ಅಥವಾ ದ. ಆಫ್ರಿಕಾ ಆತಿಥ್ಯ ವಹಿಸಬಹುದು ಎನ್ನಲಾಗಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಸೋಲಿನ ಸುಳಿವು ಭಾರತಕ್ಕೆ ಮೊದಲೇ ಸಿಕ್ಕಿತ್ತಾ?!