Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾಕ್ಕೆ ಹೊರಟ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿ ಕೊಡ್ತು ಗುಡ್ ನ್ಯೂಸ್

ಆಸ್ಟ್ರೇಲಿಯಾಕ್ಕೆ ಹೊರಟ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿ ಕೊಡ್ತು ಗುಡ್ ನ್ಯೂಸ್
Karachi , ಗುರುವಾರ, 1 ಡಿಸೆಂಬರ್ 2016 (12:19 IST)
ಕರಾಚಿ: ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ವಿಮಾನ ಏರುವ ಮೊದಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಿಕ್ಕಿದೆ ಒಂದು ಶುಭ ಸುದ್ದಿ. ಹಿರಿಯ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಅವರ ಬೌಲಿಂಗ್ ಶೈಲಿಗೆ ಐಸಿಸಿ ಕ್ಲೀನ್ ಚಿಟ್ ನೀಡಿದೆ.

ಹೀಗಾಗಿ ಅವರು ಆಸ್ಟ್ರೇಲಿಯಾ ಸರಣಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನವಂಬರ್ 17 ರಂದು ಬ್ರಿಸ್ಬೇನ್ ನ ಬೌಲಿಂಗ್ ಅಕಾಡೆಮಿಯಲ್ಲಿ ಐಸಿಸಿ ಅವರ ಬೌಲಿಂಗ್ ಶೈಲಿಯ ಪರೀಕ್ಷೆ ನಡೆಸಿತ್ತು. ಆದರೆ ಮುಂದಿನ ಪಂದ್ಯಗಳಲ್ಲಿ ಮತ್ತೆ ಹಫೀಜ್ ಬೌಲಿಂಗ್ ಶೈಲಿ ಅನುಮಾಸ್ಪದ ಎನಿಸಿದರೆ ಅಂಪಾಯರ್ ಗಳು ದೂರು ಸಲ್ಲಿಸಬಹುದು ಎಂದು ಐಸಿಸಿ ಹೇಳಿದೆ.

2015 ರಲ್ಲಿ ಹಫೀಜ್ ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿದ್ದಾರೆಂದು ಐಸಿಸಿಯಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಇದೀಗ ಸೂಕ್ತ ಸಮಯಕ್ಕೆ ಹಫೀಜ್ ಗೆ ಐಸಿಸಿ ಕ್ಲೀನ್ ಚಿಟ್ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಕ್ರಿಕೆಟ್ ನಲ್ಲಿ ಈ ದಾಖಲೆ ಮಾಡಲು ವಿರಾಟ್ ಕೊಹ್ಲಿಗೆ ಒಂದೇ ಗೆಲುವು ಸಾಕು