Select Your Language

Notifications

webdunia
webdunia
webdunia
webdunia

ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ರೋಹಿತ್ ಶರ್ಮಾ ಹೆಸರು

ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ರೋಹಿತ್ ಶರ್ಮಾ ಹೆಸರು
ದುಬೈ , ಸೋಮವಾರ, 6 ಜನವರಿ 2020 (09:29 IST)
ದುಬೈ: 2019 ನೇ ಸಾಲಿನಲ್ಲಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.


ಈ ಪ್ರಶಸ್ತಿಗೆ ಒಟ್ಟು ಮೂವರು ಕ್ರಿಕೆಟಿಗರು ಸ್ಪರ್ಧೆಯಲ್ಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್ ಮತ್ತು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಈ ರೇಸ್ ನಲ್ಲಿರುವ ಇತರ ಇಬ್ಬರು ಕ್ರಿಕೆಟಿಗರು.

ರೋಹಿತ್ ಈ ವರ್ಷ ವಿಶ್ವಕಪ್ ನಲ್ಲಿ ಐದು ಶತಕ ಸಿಡಿಸಿ ದಾಖಲೆ ಮಾಡಿದ್ದಲ್ಲದೆ, ಈ ವರ್ಷ ಮೂರೂ ಮಾದರಿಯ ಕ್ರಿಕೆಟ್ ನಿಂದ ಗರಿಷ್ಠ ರನ್ ಗಳಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಪ್ಯಾಟ್ ಕ್ಯುಮಿನ್ಸ್ ಈ ಸಾಲಿನಲ್ಲಿ 99 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದರು. ಇನ್ನು ಬೆನ್ ಸ್ಟೋಕ್ಸ್ 1500 ರನ್ 30 ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದರು. ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ವ್ಯವಸ್ಥೆಗೆ ತೊಯ್ದ ಮೈದಾನ: ಮಳೆಯಿಂದ ರದ್ದಾದ ಭಾರತ-ಲಂಕಾ ಮೊದಲ ಟಿ20