Webdunia - Bharat's app for daily news and videos

Install App

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕೇವಲ 40 ನಿಮಿಷದಲ್ಲಿ ಫೈನಲ್‌ ಪಂದ್ಯದ ಟಿಕೆಟ್‌ ಸೋಲ್ಡ್‌ಔಟ್‌

Sampriya
ಶುಕ್ರವಾರ, 7 ಮಾರ್ಚ್ 2025 (14:16 IST)
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಇದೇ ಮಾರ್ಚ್ 9ರಂದು ನಡೆಯಲಿದೆ. ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಮತ್ತು ಭಾರತ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಪಂದ್ಯದ ಎಲ್ಲಾ ಟಿಕೆಟ್‌ಗಳು ಕೇವಲ 40 ನಿಮಿಷಗಳಲ್ಲಿ ಮಾರಾಟವಾಗಿವೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ರೋಚಕ ಫೈನಲ್ ಪಂದ್ಯಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಪಂದ್ಯಕ್ಕಾಗಿ ಎರಡೂ ದೇಶಗಳ ಅಭಿಮಾನಿಗಳಲ್ಲಿ ಕಾಯುತ್ತಿದ್ದಾರೆ. ಸುಮಾರು 25000 ಆಸನ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣವು ಫೈನಲ್ ಪಂದ್ಯಕ್ಕಾಗಿ ಸಂಪೂರ್ಣವಾಗಿ ತುಂಬಿರಲಿದೆ.  

ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ನ್ಯೂಜಿಲೆಂಡ್ ಫೈನಲ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ದುಬಾರಿ ಬೆಲೆಗೆ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಸಾಮಾನ್ಯ ಪ್ರವೇಶ ಟಿಕೆಟ್ ಶುಲ್ಕಕ್ಕಾಗಿ ಕ್ರಿಕೆಟ್ ಅಭಿಮಾನಿಗಳು 250 ದಿರ್ಹಮ್‌ಗಳನ್ನು ಪಾವತಿಸಿದ್ದಾರೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ₹6 ಸಾವಿರ ನಿಗದಿಯಾಗಿದೆ. ವಿಶೇಷ ಸ್ಕೈ ಬಾಕ್ಸ್‌ಗಾಗಿ 12,000 ದಿರ್ಹಮ್‌ಗಳು ನಿಗದಿ ಮಾಡಲಾಗಿದೆ. ಅಂದರೆ ₹2.83 ಲಕ್ಷ ಪಾವತಿಸಿ ದುಬಾರಿ ಟಿಕೆಟ್ ಅನ್ನು ಖರೀದಿಸಿದ್ದಾರೆ.

ಫೈನಲ್ ಪಂದ್ಯಕ್ಕಾಗಿ ದುಬೈ ಕ್ರೀಡಾಂಗಣದ ಗೇಟ್‌ಗಳು ಸ್ಥಳೀಯ ಕಾಲಮಾನ ಪ್ರಕಾರ ಬೆಳಿಗ್ಗೆ 10 ಗಂಟೆಗೆ ತೆರೆಯಿವೆ. ಬಹುನಿರೀಕ್ಷಿತ ಫೈನಲ್ ಪಂದ್ಯ ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಗೆ ಮತ್ತು ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ.  ಭಾರತ ತಂಡವು ಮೂರನೇ ಬಾರಿ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

IPL 2025: ಚೆನ್ನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮತ್ತೆ ಅಗ್ರಸ್ಥಾನದೊಂದಿಗೆ ಪ್ಲೇಆಫ್‌ಗೆ ಸನಿಹ

RCB vs CSK Match:ಶೆಫರ್ಡ್‌ ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ಚೆನ್ನೈ, ಆರ್‌ಸಿಬಿಯಿಂದ ಬಿಗ್ ಟಾರ್ಗೆಟ್‌

CSK vs RCB Match: ಟಾಸ್ ಗೆದ್ದ ಚೆನ್ನೈ, ಫೀಲ್ಡಿಂಗ್ ಆಯ್ಕೆ

RCB vs CSK IPL 2025: ಸಿಎಸ್ ಕೆ ಜೆರ್ಸಿ ಅಂತ ಬ್ಲ್ಯಾಕ್ ಆಂಡ್ ವೈಟ್ ಜೆರ್ಸಿ ಮಾರಾಟ ಮಾಡ್ತಿರೋದು ಯಾಕೆ

ಮುಂದಿನ ಸುದ್ದಿ
Show comments