ಐಪಿಎಲ್ ನಲ್ಲೂ ಫಿಕ್ಸಿಂಗ್ ನಡೆಸಲು ಶಕೀಬ್ ಅಲ್ ಹಸನ್ ಸಂಪರ್ಕಿಸಿದ್ದ ಬುಕಿಗಳು

Webdunia
ಬುಧವಾರ, 30 ಅಕ್ಟೋಬರ್ 2019 (09:53 IST)
ದುಬೈ: ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ 2 ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾದ ಬೆನ್ನಲ್ಲೇ ಅವರು ಬುಕಿ ಜತೆ ನಡೆಸಿದ್ದ ಮಾತುಕತೆಗಳು ಬಹಿರಂಗವಾಗುತ್ತಿದೆ.


2018 ರ ಐಪಿಎಲ್ ಕೂಟದಲ್ಲೂ ಫಿಕ್ಸಿಂಗ್ ನಡೆಸಲು ಬುಕಿ ಶಕೀಬ್ ರನ್ನು ಸಂಪರ್ಕಿಸಿದ್ದ. ಇವರಿಬ್ಬರ ನಡುವೆ ವ್ಯಾಟ್ಸಪ್ ಸಂದೇಶ ರವಾನೆಯಾಗಿತ್ತು. ಆದರೆ ಶಕೀಬ್ ಬುಕಿ ಹೇಳಿದ್ದನ್ನು ಒಪ್ಪಿಕೊಂಡಿದ್ದಕ್ಕೆ ದಾಖಲೆಯಿಲ್ಲ.

ಅಷ್ಟೇ ಅಲ್ಲದೆ 2018 ರ ಬಾಂಗ್ಲಾ-ಶ್ರೀಲಂಕಾ-ಜಿಂಬಾಬ್ವೆ ನಡುವಿನ ತ್ರಿಕೋನ ಏಕದಿನ ಸರಣಿಯಲ್ಲೂ ಬುಕಿಗಳು ಶಕೀಬ್ ರನ್ನು ಸಂಪರ್ಕಿಸಿದ್ದಕ್ಕೆ ದಾಖಲೆ ಸಿಕ್ಕಿದೆ. ಹೀಗಾಗಿ ಇವೆರಡೂ ಕಾರಣಕ್ಕೆ ಶಕೀಬ್ ಐಸಿಸಿಯ ಭ್ರಷ್ಟಾಚಾರ ನಿಯಂತ್ರಣ ಖಾಯಿದೆಯ ಸ್ಪಷ್ಟ ಉಲ್ಲಂಘನೆ ಮಾಡಿರುವುದು ಪಕ್ಕಾ ಆಗಿದೆ. ಹೀಗಾಗಿ 2020 ರ ಅಕ್ಟೋಬರ್ ವರೆಗೆ ಶಕೀಬ್‍ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧ ಶಿಕ್ಷೆ ಜಾರಿಯಲ್ಲಿರಲಿದೆ.

ಬಾಂಗ್ಲಾದೇಶ ಕ್ರಿಕೆಟ್ ಗೆ ಹಲವು ದಾಖಲೆಗಳನ್ನು, ಖ್ಯಾತಿಯನ್ನು ತಂದುಕೊಟ್ಟ ಯಶಸ್ವೀ ಕ್ರಿಕೆಟಿಗ ಶಕೀಬ್ ಮೇಲೆ ಇಂತಹದ್ದೊಂದು ಆಪಾದನೆ ಬಂದಿರುವುದು ಬಾಂಗ್ಲಾ ಕ್ರಿಕೆಟ್ ಗೇ ಒಂದು ರೀತಿಯ ಕಪ್ಪು ಚುಕ್ಕೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ರೋಹಿತ್ ಶರ್ಮಾ ಕಣ್ಣು ರೆಪ್ಪೆ ಬಿದ್ದಿದ್ದು ನೋಡಿ ರಿಷಭ್ ಪಂತ್ ಏನ್ಮಾಡಿದ್ರು: ಫನ್ನಿ ವಿಡಿಯೋ

ಟೆಸ್ಟ್ ಆಡುವ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಏಕದಿನ ತಂಡದಲ್ಲಿ ಯಾಕಿದ್ದಾರೆ

IND- SA 2nd ODI: ವಿರಾಟ್‌, ಋತುರಾಜ್‌ ಶತಕ ವ್ಯರ್ಥ; ರನ್‌ ಮಳೆಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ,

ಶತಕದ ಬೆನ್ನಲ್ಲೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿಗೆ ಬಡ್ತಿ: ಅಗ್ರಸ್ಥಾನದಲ್ಲಿ ರೋಹಿತ್‌ ಶರ್ಮಾ

ಮುಂದಿನ ಸುದ್ದಿ
Show comments