Webdunia - Bharat's app for daily news and videos

Install App

ವೃತ್ತಿ ಜೀವನದಲ್ಲಿ ಎಷ್ಟು ಬಾರಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು ಎಂಬ ಲೆಕ್ಕ ಇಲ್ಲಿದೆ

Krishnaveni K
ಬುಧವಾರ, 24 ಏಪ್ರಿಲ್ 2024 (14:43 IST)
Photo Courtesy: Twitter
ಮುಂಬೈ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ, ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಇಂದು 51 ನೇ ಜನ್ಮದಿನ ಆಚರಿಸಿಕೊಳ‍್ಳುತ್ತಿದ್ದಾರೆ.

 ಸಚಿನ್ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರು ಆಡುತ್ತಿದ್ದ ಕಾಲದಲ್ಲಿ ಡಿಆರ್ ಎಸ್ ಜಾರಿಯಲ್ಲಿರಲಿಲ್ಲ. ಆದರೆ ಆಗಲೂ ಅನೇಕ ಬಾರಿ ಅಂಪಾಯರ್ ಗಳು ತಪ್ಪು ನಿರ್ಣಯ ಮಾಡುತ್ತಿದ್ದುದು ಸಹಜವಾಗಿತ್ತು. ಅಂಪಾಯರ್ ಗಳೂ ಮನುಷ್ಯರೇ ತಾನೇ?

ಆದರೆ ಈಗ ಅಂಪಾಯರ್ ಗಳು ತಪ್ಪು ನಿರ್ಣಯ ನೀಡಿದರೆ ಆಟಗಾರರಿಗೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಡಿಆರ್ ಎಸ್ ನಿಯಮದ ಅನುಕೂಲವಿದೆ. ಆದರೆ ಸಚಿನ್ ಆಡುತ್ತಿದ್ದಾಗ ಡಿಆರ್ ಎಸ್ ಇರಲಿಲ್ಲ. ಫೀಲ್ಡ್ ಅಂಪಾಯರ್ ಗಳು ಮನಸ್ಸು ಮಾಡಿದರೆ ಥರ್ಡ್ ಅಂಪಾಯರ್ ಗೆ ಮನವಿ ಸಲ್ಲಿಸಬಹುದಿತ್ತು.

ಆದರೆ ಇದರಿಂದ ಕೆಲವೊಮ್ಮೆ ಆಟಗಾರರಿಗೆ ತೀರಾ ಅನ್ಯಾಯವಾಗುತ್ತಿತ್ತು. ಇದೇ ರೀತಿ ಸಚಿನ್ ತಮ್ಮ 20 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 39 ಬಾರಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಆದರೆ ಆಗೆಲ್ಲಾ ಅವರು ಹೆಚ್ಚೆಂದರೆ ತಲೆ ತಮ್ಮಷ್ಟಕ್ಕೆ ತಾವೇ ಕೊಡವಿಕೊಂಡು ಮೌನವಾಗಿ ಪೆವಿಲಿಯನ್ ಗೆ ಹೆಜ್ಜೆಹಾಕುತ್ತಿದ್ದರು. ಅದರಲ್ಲೂ ವಿಶೇಷವಾಗಿ ವೆಸ್ಟ್ ಇಂಡೀಸ್ ಮೂಲದ ಅಂಪಾಯರ್ ಸ್ಟೀವ್ ಬಕ್ನರ್ ಅಂತೂ ಸಚಿನ್ ವಿರುದ್ಧ ವಿವಾದಾತ್ಮಕ ತೀರ್ಪು ನೀಡುವುದಕ್ಕೇ ಕುಖ್ಯಾತಿ ಪಡೆದಿದ್ದರು. ಅವರಷ್ಟು ಬಹುಶಃ ಸಚಿನ್ ರನ್ನು ಟಾರ್ಗೆಟ್ ಮಾಡಿದವರು ಇನ್ನೊಬ್ಬರಿರಲಿಲ್ಲ. ಹಾಗಿದ್ದರೂ ಒಮ್ಮೆಯೂ ಸಚಿನ್ ಅಂಪಾಯರ್ ಜೊತೆ ವಾಗ್ವಾದಕ್ಕಿಳಿದಿರಲಿಲ್ಲ. ಇದಕ್ಕೇ ಅವರು ಗ್ರೇಟ್ ಎನಿಸಿಕೊಂಡಿದ್ದು.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments