Select Your Language

Notifications

webdunia
webdunia
webdunia
webdunia

ಧೋನಿಯ ಭವಿಷ್ಯವನ್ನು ಬದಲಾಯಿಸಿದ 2004ರ ಜಿಂಬಾಬ್ವೆ ಪ್ರವಾಸ

ಧೋನಿಯ ಭವಿಷ್ಯವನ್ನು ಬದಲಾಯಿಸಿದ 2004ರ ಜಿಂಬಾಬ್ವೆ ಪ್ರವಾಸ
ನವದೆಹಲಿ: , ಶನಿವಾರ, 18 ಜೂನ್ 2016 (14:12 IST)
ಜಿಂಬಾಬ್ವೆಗೆ ಭಾರತ ತಂಡವನ್ನು ಪ್ರಕಟಿಸಿದಾಗ ಹಿರಿಯ ಆಟಗಾರ ಧೋನಿಯನ್ನು ಕೂಡ ಸೇರ್ಪಡೆ ಮಾಡಿದ್ದು ಖಂಡಿತವಾಗಿ ಅಚ್ಚರಿ ಮೂಡಿಸಿತ್ತು. ಈ ಪ್ರವಾಸಕ್ಕೆ ಹಿರಿಯ ಆಟಗಾರರಿಗೆ ಸಾಮಾನ್ಯವಾಗಿ ವಿಶ್ರಾಂತಿ ನೀಡಲಾಗುತ್ತದೆ. ಆದರೆ ಕಡಿಮೆ ಪ್ರಾಮುಖ್ಯತೆಯ ಈ ಪ್ರವಾಸಕ್ಕೆ ಯುವಆಟಗಾರರ ಜತೆ ತೆರಳಲು ಧೋನಿ ನಿರ್ಧರಿಸಿದ್ದು ಕೂಡ ಆಸಕ್ತಿದಾಯಕ ಸಂಗತಿ.
 
 ನಿರೀಕ್ಷೆಯಂತೆ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ಸವಾಲನ್ನು ಭಾರತೀಯರು ಹಗುರವಾಗಿ ತೆಗೆದುಕೊಂಡಿದ್ದರು. ಮೈದಾನದ ಹೊರಗಿನ ಸಮಾರಂಭದಲ್ಲಿ ಧೋನಿ ಅತೀ ಆಸಕ್ತಿದಾಯಕ ಕಾಮೆಂಟ್ ಒಂದನ್ನು ಮಾಡಿದ್ದಾರೆ. ಹರಾರೆಯಲ್ಲಿ ಇಂಡಿಯಾ ಹೌಸ್‌ಗೆ ಟೀಂ ಭೇಟಿ ನೀಡಿದಾಗ, ಧೋನಿ ಜಿಂಬಾಬ್ವೆಯನ್ನು ವಿಶೇಷ ಸ್ಥಳವೆಂದು ಪರಿಗಣಿಸಿದ್ದೇಕೆಂದು ಬಹಿರಂಗಮಾಡಿದ್ದಾರೆ.
 
ಜಿಂಬಾಬ್ವೆ ನನಗೆ ವಿಶೇಷ ಸ್ಥಳವಾಗಿದೆ. ಭಾರತಕ್ಕೆ ಆಡುವ ಮುಂಚೆ, 2004ರಲ್ಲಿ ತಾವು ಕೈಗೊಂಡ ಜಿಂಬಾಬ್ವೆ ಪ್ರವಾಸ ತಮ್ಮನ್ನು ಬೆಳಕಿಗೆ ತರಲು ಅವಕಾಶ ನೀಡಿ ಭಾರತ ತಂಡದಲ್ಲಿ ಕಾಯಂ ಸ್ಥಾನವನ್ನು ಕಲ್ಪಿಸಿತು. ಆದ್ದರಿಂದ ಇದು ನನಗೆ ವಿಶೇಷ ಸ್ಥಾನವಾಗಿದ್ದು, ಇಲ್ಲಿಗೆ ಬರಲು ನನಗೆ ಸಂತಸವಾಗುತ್ತದೆ ಎಂದು ಹೇಳಿದರು. 
 
2004ರಲ್ಲಿ ಧೋನಿ ಭಾರತ ಎ ತಂಡದಲ್ಲಿದ್ದು 3 ನಾಲ್ಕು ದಿನಗಳ ಮತ್ತು ಒಂದು 50 ಓವರಿನ ಪಂದ್ಯಗಳನ್ನು  ಜಿಂಬಾಬ್ವೆ ಸೆಲೆಕ್ಟ್ ಇಲೆವನ್ ಮತ್ತು ಜಿಂಬಾಬ್ವೆ ಎ ತಂಡದ ವಿರುದ್ಧ ಆಡಿದ್ದರು. ಎರಡರಲ್ಲೂ ಆಡಿದ್ದ ಧೋನಿ ಆಯ್ಕೆದಾರರನ್ನು ಮೆಚ್ಚಿಸಿದ್ದರು. ಎರಡನೇ ನಾಲ್ಕು ದಿನಗಳ ಪಂದ್ಯಗಲ್ಲಿ ಧೋನಿ 7 ಕ್ಯಾಚ್‌ಗಳು, ನಾಲ್ಕು ಸ್ಟಂಪ್‌ಗಳು ಮತ್ತು 45 ರನ್ ಗಳಿಸಿದ್ದರು. ಭಾರತ ಎಲ್ಲಾ ನಾಲ್ಕು ಪಂದ್ಯಗಳನ್ನು ಆ ಸರಣಿಯಲ್ಲಿ ಗೆದ್ದು ಬಿಸಿಸಿಐಗೆ ಧೋನಿ ಉತ್ತಮ ಭರವಸೆ ಮೂಡಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನದ ನುಡಿ