Publish Date: Sun, 13 Aug 2017 (12:41 IST)
Updated Date: Sun, 13 Aug 2017 (12:43 IST)
ಭಾರತ-ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ತಂಡದ ಹಾರ್ದಿಕ್ ಪಾಂಡ್ಯ ಆಕರ್ಷಕ ಶತಕ ಸಿಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಶತಕ ದಾಖಲಿಸಿರುವ ಪಾಂಡ್ಯ, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ರನ್‌ಗಳ ಮೊತ್ತವನ್ನು ಹೆಚ್ಚಿಸಲು ನೆರವಾಗಿದ್ದಾರೆ.
ಹಾರ್ದಿಕ್ ಪಾಂಡ್ಯ 93 ಎಸೆತೆಗಳಲ್ಲಿ ಏಳು ಸಿಕ್ಸರ್ ಮತ್ತು ಎಂಟು ಬೌಂಡರಿಗಳ ನೆರವಿನೊಂದಿಗೆ ಶತಕದ ಗಡಿ ದಾಟಿದರು.
ಹಾರ್ದಿಕ್ ಪಾಂಡ್ಯ ಮತ್ತು ಉಮೇಶ್ ಯಾದವ್ ಕ್ರೀಸ್‌ನಲ್ಲಿದ್ದು, ಯಾದವ್ 3 ರನ್‌ಗಳಿಸಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.