Webdunia - Bharat's app for daily news and videos

Install App

ನಿಷೇಧಕ್ಕೊಳಗಾಗಿ ಮನೆ ಸೇರಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸ್ಥಿತಿ ಏನಾಗಿದೆ ಗೊತ್ತಾ?

Webdunia
ಗುರುವಾರ, 17 ಜನವರಿ 2019 (09:18 IST)
ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದರೆಂದು ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇದೀಗ ಮನೆಯಲ್ಲಿಯೇ ಇದ್ದಾರೆ.


ತಮ್ಮ ಪುತ್ರನ ಬಗ್ಗೆ ಹಾರ್ದಿಕ್ ತಂದೆ ಹಿಮಾಂಶು ಪಾಂಡ್ಯ ಮಾತನಾಡಿದ್ದು, ಆಸ್ಟ್ರೇಲಿಯಾದಿಂದ ಬಂದ ಮೇಲೆ ಆತ ಮನೆಯಿಂದಲೇ ಹೊರಗೆ ಬಂದಿಲ್ಲ ಎಂದಿದ್ದಾರೆ.

‘ಹಾರ್ದಿಕ್ ಪ್ರತೀ ಕ್ಷಣವೂ ತಾನು ಹೇಳಿದ ಹೇಳಿಕೆ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇದು ಸಂಕ್ರಾಂತಿ ಹಬ್ಬದ ಸಮಯ. ಸಾಮಾನ್ಯವಾಗಿ ಹಾರ್ದಿಕ್ ಈ ಹಬ್ಬಕ್ಕೆ ಗಾಳಿಪಟ ಹಾರಿಸುವುದನ್ನು ಇಷ್ಟಪಡುತ್ತಾನೆ. ಆದರೆ ಆಸ್ಟ್ರೇಲಿಯಾದಿಂದ ಬಂದ ಮೇಲೆ ಯಾಕೋ ಬೇಸರದಲ್ಲಿದ್ದಾನೆ. ಗಾಳಿಪಟ ಹಾರಿಸಿಲ್ಲ. ಮನೆಯಿಂದ ಹೊರಗೇ ಬಂದಿಲ್ಲ. ಯಾರ ಫೋನ್ ಕಾಲ್ ಗಳನ್ನೂ ಸ್ವೀಕರಿಸುತ್ತಿಲ್ಲ. ಮೊನ್ನೆ ನಡೆದ ಏಕದಿನ ಪಂದ್ಯವನ್ನು ಟಿವಿಯಲ್ಲಿ ನೋಡಿದ್ದ. ಅದು ಬಿಟ್ಟರೆ ಸುಮ್ಮನೇ ರೆಸ್ಟ್ ಮಾಡುತ್ತಿದ್ದಾನೆ. ಬೇಸರದಲ್ಲಿದ್ದಾನೆ’ ಎಂದು ಹಿಮಾಂಶು ಹೇಳಿಕೊಂಡಿದ್ದಾರೆ.

ಹಾರ್ದಿಕ್ ಮತ್ತು ಕೆಎಲ್ ರಾಹುಲ್ ಇಬ್ಬರೂ ತಮ್ಮ ಮಾತಿಗೆ ಬಿಸಿಸಿಐ ಮುಂದೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಇದೀಗ ಬಿಸಿಸಿಐ ನಿರ್ಧಾರಕ್ಕಾಗಿ ಎದುರು ನೋಡುತ್ತಿರುವುದಾಗಿ ಹಾರ್ದಿಕ್ ತಂದೆ ಹಿಮಾಂಶು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅರ್ಷ್ ದೀಪ್ ಸಿಂಗ್ ರನ್ನು ಟೀಂ ಇಂಡಿಯಾ ಹೊರಗಿಡುತ್ತಿರುವುದೇಕೆ, ಇಲ್ಲಿದೆ ಕಾರಣ

ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

ಬಾಯ್ಕಾಟ್ ಎನ್ನುತ್ತಿದ್ದರೂ ಭಾರತ ಪಾಕಿಸ್ತಾನ ಮ್ಯಾಚ್ ಟಿಕೆಟ್ ಗೆ ಭರ್ಜರಿ ಬೆಲೆ

Asia Cup Cricket: ಯುಎಇ ನೀಡಿದ ಗುರಿಯನ್ನು ನಾಲ್ಕೇ ಓವರ್ ಗಳಲ್ಲಿ ಚಚ್ಚಿದ ಬಿಸಾಕಿದ ಟೀಂ ಇಂಡಿಯಾ

ಕ್ರಿಕೆಟಿಗ ಪೃಥ್ವಿ ಶಾಗೆ ಕೋರ್ಟ್‌ನಿಂದ ಬಿತ್ತು ₹100ದಂಡ, ಪ್ರಕರಣ ಹಿನ್ನೆಲೆ ಏನ್‌ ಗೊತ್ತಾ

ಮುಂದಿನ ಸುದ್ದಿ
Show comments