ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಬದಲು ಈ ಯುವ ಆಟಗಾರರಿಗೆ ಮಣೆ

Krishnaveni K
ಬುಧವಾರ, 10 ಏಪ್ರಿಲ್ 2024 (11:04 IST)
Photo Courtesy: Twitter
ಮುಂಬೈ: ಇದೀಗ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ಫ್ರಾಂಚೈಸಿ ಪರ ಹೇಗೆ ಆಡುತ್ತಿದ್ದಾರೆ ಎಂಬ ಬಗ್ಗೆ ಆಯ್ಕೆ ಸಮಿತಿ ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ.

ಐಪಿಎಲ್ ಮುಗಿದ ತಕ್ಷಣವೇ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಹೀಗಾಗಿ ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಐಪಿಎಲ್ ನಲ್ಲಿ ಆಟಗಾರರ ಪ್ರದರ್ಶನವನ್ನು ಆಯ್ಕೆ ಸಮಿತಿ ಗಮನಿಸುತ್ತಿದೆ. ಆ ಪ್ರಕಾರ ಕೆಲವು ಹಿರಿಯ ಆಟಗಾರರನ್ನೇ ಕೈ ಬಿಟ್ಟರೂ ಅಚ್ಚರಿಯಿಲ್ಲ.

ಮೂಲಗಳ ಪ್ರಕಾರ ಮುಂಬರುವ ಟಿ20 ವಿಶ್ವಕಪ್ ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಯುವ ಆಟಗಾರರನ್ನೇ ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಅನುಭವಿಯಾಗಿ ನಾಯಕ ರೋಹಿತ್ ಶರ್ಮಾ ಇರಲಿದ್ದಾರೆ. ಅವರ ಹೊರತಾಗಿ ಟಿ20 ಕ್ರಿಕೆಟ್ ನಲ್ಲಿ ಇತ್ತೀಚೆಗೆ ಮಿಂಚುತ್ತಿರುವ ಶಿವಂ ದುಬೆ, ಋತುರಾಜ್ ಗಾಯಕ್ ವಾಡ್, ಜಿತೇಶ್ ಶರ್ಮ, ರಿಂಕು ಸಿಂಗ್ ಮುಂತಾದ ಆಟಗಾರರನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ.

ಹೀಗಾದಲ್ಲಿ ಐಪಿಎಲ್ ನಲ್ಲಿ ತೀವ್ರ ಸಾಧಾರಣ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಅನುಭವಿ ವಿರಾಟ್ ಕೊಹ್ಲಿಗೂ ಕೊಕ್ ನೀಡುವ ಸಾಧ‍್ಯತೆಯಿದೆ. ಈ ಹಿಂದೆ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದು ಕಿರಿಯ ಆಟಗಾರರಿಂದಲೇ. ಹೀಗಾಗಿ ಈ ಬಾರಿಯೂ ಹಿರಿಯ ಆಟಗಾರರನ್ನು ಕಡೆಗಣಿಸಿ ಉತ್ಸಾಹಿ ಯುವ ಪ್ರತಿಭೆಗಳನ್ನು ಆರಿಸಲು ಆಯ್ಕೆ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಮುಂದಿನ ಸುದ್ದಿ
Show comments