ರೋಹಿತ್ ಶರ್ಮಾ ಪತ್ನಿ ರಿತಿಕಾರನ್ನು ತಬ್ಬಿಕೊಂಡ ಹಾರ್ದಿಕ್ ಪಾಂಡ್ಯ

Krishnaveni K
ಮಂಗಳವಾರ, 26 ಮಾರ್ಚ್ 2024 (12:25 IST)
Photo Courtesy: Twitter
ಮುಂಬೈ: ಮುಂಬೈ ಇಂಡಿಯನ್ಸ್ ಆಟಗಾರರು ನಿನ್ನೆ ಜೋರಾಗಿ ಹೋಳಿ ಹಬ್ಬ ಆಚರಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕುಟುಂಬ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಇಡೀ ಮುಂಬೈ ತಂಡ ಜೊತೆಯಾಗಿತ್ತು.

ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಆಟಗಾರರು ಬಣ್ಣದಿಂದ ಮಿಂದೆದ್ದರು. ರೋಹಿತ್ ಶರ್ಮಾ ಗುರುತೇ ಸಿಗದಷ್ಟು ಬಣ್ಣದಲ್ಲಿ ಮುಳುಗಿ ಹೋಗಿದ್ದರು. ರೋಹಿತ್ ಪುತ್ರಿ ಸಮೈರಾ ಜೊತೆ ಮಗುವಾಗಿ ತಾವೂ ಬಣ್ಣದ ನೀರಿನಲ್ಲಿ ಆಡುತ್ತಿದ್ದ ದೃಶ‍್ಯ ಎಲ್ಲರ ಗಮನ ಸೆಳೆದಿತ್ತು.

ಆದರೆ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ರೋಹಿತ್ ಪತ್ನಿ ರಿತಿಕಾರನ್ನು ಹಾರ್ದಿಕ್ ತಬ್ಬಿಕೊಂಡ ದೃಶ್ಯ. ಹೋಳಿ ಹಬ್ಬದ ಆಚರಣೆ ಸಂದರ್ಭದ ವಿಡಿಯೋ, ಫೋಟೋಗಳನ್ನು ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ರಿತಿಕಾಗೆ ತಾನಾಗಿಯೇ ಮುಂದೆ ಬಂದು ಹಾರ್ದಿಕ್ ತಬ್ಬಿ ಶುಭಾಶಯ ಸಲ್ಲಿಸಿದ್ದಾರೆ.

ಈ ಮೊದಲು ರೋಹಿತ್ ರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿದಾಗ ರಿತಿಕಾ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಅಲ್ಲದೆ ಮೊನ್ನೆ ಮೊದಲ ಪಂದ್ಯದ ವೇಳೆ ರೋಹಿತ್ ಶರ್ಮಾರನ್ನು ಹಾರ್ದಿಕ್ ನಡೆಸಿಕೊಂಡ ರೀತಿ ಟೀಕೆಗೆ ಕಾರಣವಾಯಿತು. ಈ ಎಲ್ಲಾ ವಿವಾದಗಳ ನಡುವೆ ಹಾರ್ದಿಕ್-ರಿತಿಕಾ ತಬ್ಬಿಕೊಂಡು ಪ್ಯಾಚ್ ಅಪ್ ಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಮುಂದಿನ ಸುದ್ದಿ
Show comments