ಇಂಧೋರ್: ರಣಜಿ ಟ್ರೋಫಿ ಫೈನಲ್ ನಲ್ಲಿ ಗುಜರಾತ್ ತಂಡ ಪ್ರಬಲ ಮುಂಬೈಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ದ್ವಿತೀಯ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 63 ರನ್ ಗಳ ಮುನ್ನಡೆ ಪಡೆದಿದೆ.
ನಿನ್ನೆ ಮುಂಬೈ ಗುಜರಾತ್ ದಾಳಿಗೆ ತತ್ತರಿಸಿ ಕೇವಲ228 ಕ್ಕೆ ಆಲೌಟ್ ಆಗಿತ್ತು. ಅದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಗುಜರಾತ್ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು291 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.
ನಾಯಕ ಪಾರ್ಥಿವ್ ಪಟೇಲ್ ಬಿರುಸಿನ ಆಟವಾಡಿ 90 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಮನ್ ಪ್ರೀತ್ ಜುನೇಜಾ 77 ರನ್ ಗಳಸಿ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಮುಂಬೈ ಪರ ಅಭಿಷೇಕ್ ನಾಯರ್ ಮೂರು ವಿಕೆಟ್ ಕಿತ್ತರು.
ಈ ದಿನದ ಗೌರವವೂ ಗುಜರಾತ್ ಪಾಲಾಯಿತು. ಮುಂಬೈ ಫೀಲ್ಡರ್ ಗಳು ಮೂರು ಕ್ಯಾಚ್ ಬಿಟ್ಟಿದ್ದು ದುಬಾರಿಯಾಯಿತು. ಮುಂಬೈ ಮತ್ತೆ ಹಿರಿಯ ಬೌಲರ್ ನಾಯರ್ ಮೇಲೇ ಅವಲಂಬಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ