Select Your Language

Notifications

webdunia
webdunia
webdunia
webdunia

IPL 2025, RCB vs PBKS Final ಬಗ್ಗೆ ಅಚ್ಚರಿ ಭವಿಷ್ಯ ನುಡಿದ ಗಿಣಿ

RCB vs PBKS ಪಂದ್ಯ ಭವಿಷ್ಯ

Sampriya

ಬೆಂಗಳೂರು , ಮಂಗಳವಾರ, 3 ಜೂನ್ 2025 (15:28 IST)
Photo Credit X
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನ 18 ನೇ ಆವೃತ್ತಿಯ ಫೈನಲ್‌ ಟ್ರೋಪಿಗಾಗಿ ಇಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್‌ ಮುಖಾಮುಖಿಯಾಗಲಿದೆ.  

ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಅದ್ಧೂರಿ ಗ್ರ್ಯಾಂಡ್‌ ಫಿನಾಲೆಗೆ ಸ್ಟೇಡಿಯಂ ಸಜ್ಜಾಗಿದೆ.  

ಎರಡೂ ತಂಡಗಳು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಈ ಫೈನಲ್ ಐತಿಹಾಸಿಕ ಹಣಾಹಣಿಯಾಗಲಿದೆ. ಆರ್‌ಸಿಬಿ ಅಭಿಮಾನಿಗಳು ಈಗಾಗಲೇ ತಮ್ಮ ನೆಚ್ಚಿನ ತಂಡ ಜಯಶಾಲಿಯಾಗಬೇಕೆಂದು ವಿಶೇಷ ಪೂಜೆ ಹಾಗೂ ಹರಕೆ ಕಟ್ಟಿಸಿಕೊಳ್ಳುತ್ತಿರುವುದನ್ನು ಕಾಣಬಹುದು. 

ಬೆಟ್ಟಿಂಗ್ ಮಾರುಕಟ್ಟೆಯ ಪ್ರಕಾರ, RCB ಐಪಿಎಲ್ 2025 ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ, ಇದು ಫ್ರಾಂಚೈಸ್ ಇತಿಹಾಸದಲ್ಲಿ ಒಂದು ಮಹತ್ವದ ಸಂದರ್ಭವಾಗಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಿಣಿ ಭವಿಷ್ಯವೊಂದು ವೈರಲ್ ಆಗಿದೆ. ಅದರಲ್ಲಿ ತಮಿಳುನಾಡಿನ ಗಿಣಿ ಶಾಸ್ತ್ರ ನೋಡುವ ವ್ಯಕ್ತಿ ಇಂದು ನಡೆಯುವ ಫೈನಲ್‌ನಲ್ಲಿ ಆರ್‌ಸಿಬಿ ಗೆಲ್ಲುತ್ತಾ, ಪಂಜಾಬ್ ಗೆಲ್ಲುತ್ತಾ ಎಂದು ಗಿಳಿಯಲ್ಲಿ ಕೇಳುತ್ತಾರೆ. 

ಗಿಳಿ, ಪಂಜಾಬ್ ಹೆಸರಿರುವ ಕಾರ್ಡ್‌ನ್ನು ತೆಗೆಯುತ್ತದೆ. ಗಿಣಿ ಶಾಸ್ತ್ರದ ಹಾಗೇ ಇಂದು ಪಂಜಾಬ್ ಗೆಲ್ಲುತ್ತದೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

IPL 2025 Final: ಆರ್ ಸಿಬಿ ಕಪ್ ಗೆಲ್ತು ಎಂದು ಸಂಭ್ರಮಾಚರಣೆ ಮಾಡುವ ಮುನ್ನ ಹುಷಾರ್: ಈ ಸೂಚನೆ ಗಮನಿಸಿ