Webdunia - Bharat's app for daily news and videos

Install App

Gautam Gambhir: ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಗೌತಮ್ ಗಂಭೀರ್ ಮಹತ್ವದ ಹೇಳಿಕೆ

Krishnaveni K
ಗುರುವಾರ, 5 ಜೂನ್ 2025 (20:23 IST)
Photo Credit: X
ಮುಂಬೈ: ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಇಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಂಗ್ಲರ ನಾಡಿಗೆ ವಿಮಾನವೇರುವ ಮುನ್ನ ಟೀಂ ಇಂಡಿಯಾ ನೂತನ ಟೆಸ್ಟ್ ನಾಯಕ ಶುಬ್ಮನ್ ಗಿಲ್ ಜೊತೆ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಚಿನ್ನಸ್ವಾಮಿ ದುರಂತದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಎಲ್ಲಕ್ಕಿಂತ ಜೀವನ ದೊಡ್ಡದು ಎಂದಿದ್ದಾರೆ. ‘ನಾನು ಯಾವತ್ತೂ ರೋಡ್ ಶೋಗಳನ್ನು ಬೆಂಬಲಿಸಲ್ಲ. ಯಾವತ್ತೂ ರೋಡ್ ಶೋ ಮಾಡಬಾರದು. 2007 ರಲ್ಲಿ ವಿಶ್ವಕಪ್ ಗೆದ್ದ ಬಳಿಕವೂ ರೋಡ್ ಶೋ ಬೇಡ ಎಂದೇ ನನ್ನ ಅಭಿಪ್ರಾಯವಾಗಿತ್ತು. ಭವಿಷ್ಯದಲ್ಲಿ ನಾವು ಇಂತಹ ಕಾರ್ಯಕ್ರಮಗಳನ್ನು ಸ್ಟೇಡಿಯಂನಲ್ಲಿ ಆಯೋಜಿಸಬೇಕು. ದುರಂತದಲ್ಲಿ ಮಡಿದವರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ.

ನಾವು ಇನ್ನೂ ಹೆಚ್ಚು ಜವಾಬ್ಧಾರಿಯುತವಾಗಿರಬೇಕು. ಪ್ರತಿಯೊಂದು ಜೀವಕ್ಕೂ ಬೆಲೆಯಿದೆ. ಒಂದು ವೇಳೆ ರೋಡ್ ಶೋ ಮಾಡಲು ವ್ಯವಸ್ಥೆಯಾಗಿಲ್ಲ ಎಂದಾದರೆ ಮಾಡಲೇಬಾರದು. ಈಗ ಕಳೆದುಕೊಂಡಿರುವ 11 ಮಂದಿಯ ಪ್ರಾಣವನ್ನು ಮರಳಿ ತರಲು ನಮಗೆ ಸಾಧ್ಯವಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಲೆಗ್‌ಸ್ಪಿನ್ನರ್‌ ಅಮಿತ್ ಮಿಶ್ರಾ

ಲಂಡನ್ ನಲ್ಲಿ ಮಾಡಿದ್ರೇನು, ವಯಸ್ಸಾದ್ರೇನು ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ನೋಡಿ

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಈ ರೀತಿ ಆಡುವುದು ಇದೇ ಫಸ್ಟ್

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೂರು ತಿಂಗಳ ಬಳಿಕ ಕೊನೆಗೂ ಮೌನ ಮುರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಮಾತ್ರ ಏನು ಸ್ಪೆಷಲ್ಲಾ.. ಲಂಡನ್ ವಾಸಿ ಕೊಹ್ಲಿಗೆ ಅಲ್ಲಿಯೇ ಫಿಟ್ನೆಸ್ ಟೆಸ್ಟ್

ಮುಂದಿನ ಸುದ್ದಿ
Show comments