Select Your Language

Notifications

webdunia
webdunia
webdunia
webdunia

ಪಾಕ್ ಕಳಪೆ ಬ್ಯಾಟಿಂಗ್: ದಿಗ್ಗಜರ ನೆರವು ಪಡೆಯಲು ಸಕ್ಲೇನ್ ಮುಸ್ತಾಕ್ ಸಲಹೆ

ಪಾಕ್ ಕಳಪೆ ಬ್ಯಾಟಿಂಗ್:  ದಿಗ್ಗಜರ ನೆರವು ಪಡೆಯಲು ಸಕ್ಲೇನ್ ಮುಸ್ತಾಕ್ ಸಲಹೆ
ಕರಾಚಿ: , ಗುರುವಾರ, 3 ಮಾರ್ಚ್ 2016 (14:27 IST)
ರಾಷ್ಟ್ರೀಯ ತಂಡವನ್ನು ಬಾಧಿಸುತ್ತಿರುವ ಕಳಪೆ ಬ್ಯಾಟಿಂಗ್ ಸಮಸ್ಯೆಗಳಿಗೆ ಕ್ರಿಕೆಟ್ ಆಡಳಿತ ಮಂಡಳಿ ಮಾಜಿ ಬ್ಯಾಟಿಂಗ್ ದಿಗ್ಗಜರ ನೆರವನ್ನು ಪಡೆಯಬೇಕೆಂದು ಮಾಜಿ ಸ್ಪಿನ್ನರ್ ಸಕ್ಲೇನ್ ಮುಸ್ತಾಕ್ ಸಲಹೆ ಮಾಡಿದ್ದಾರೆ.  ಜಾವೇದ್ ಮಿಯಂದಾದ್, ಇನ್ಜಮುಮ್ ಉಲ್ ಹಕ್ ಮತ್ತು ಮಹಮ್ಮದ್ ಯುಸುಫ್ ಮುಂತಾದ ದಿಗ್ಗಜರ ಸೇವೆ ಬಳಸಿಕೊಂಡು ಬ್ಯಾಟಿಂಗ್ ವಿಭಾಗದಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ಮಾಡುವುದಾಗಿ ತಿಳಿಸಿದರು. 
 
 ನಮ್ಮ ಬ್ಯಾಟಿಂಗ್ ಮೊನಚಾಗಿಲ್ಲದಿರುವುದು ಪಂದ್ಯಗಳನ್ನು ಸೋಲಲು ಕಾರಣ. ಕಿರು ಓವರುಗಳ ಕ್ರಿಕೆಟ್‌ನ ಬ್ಯಾಟಿಂಗ್ ಸ್ಥಿರತೆ ಇಲ್ಲವಾದ್ದರಿಂದ ಅದನ್ನು ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅವರು ಹೇಳಿದರು. 
 
 ಪಿಸಿಬಿ ಈ ಬ್ಯಾಟಿಂಗ್ ದಿಗ್ಗಜರು ಅನುಭವಗಳನ್ನು ಬಳಸಿಕೊಂಡು ರಾಷ್ಟ್ರೀಯ ತಂಡದ ಆಟಗಾರರಿಗೆ ನೆರವಾಗಬೇಕೆಂದೂ ಮತ್ತು ಸ್ಥಳೀಯ, ಜೂನಿಯರ್ ಮತ್ತು ಅಕಾಡೆಮಿ ಮಟ್ಟಗಳಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸಕ್ಲೇನ್ ಸಲಹೆ ಮಾಡಿದರು. 
 
 ಪಿಸಿಬಿ ಜಿಂಬಾಬ್ವೆ ಮಾಜಿ ಬ್ಯಾಟ್ಸ್‌ಮನ್ ಗ್ರಾಂಟ್ ಫ್ಲವರ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಆದರೆ ಏಕದಿನ ಮತ್ತು ಟಿ 20 ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡದ ಆಟಗಾರರು ಸ್ಥಿರತೆಯ ಪ್ರದರ್ಶನ ನೀಡಲು ವಿಫಲರಾಗಿದ್ದರು. 
 

Share this Story:

Follow Webdunia kannada