Publish Date: Wed, 02 Dec 2020 (08:57 IST)
Updated Date: Wed, 02 Dec 2020 (08:59 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಮತ್ತು ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಸತತವಾಗಿ ಟಾಸ್ ಸೋಲುತ್ತಲೇ ಬಂದಿದ್ದ ವಿರಾಟ್ ಕೊಹ್ಲಿ ಕೊನೆಗೂ ಟಾಸ್ ಗೆದ್ದು ಶುಭಾರಂಭ ಮಾಡಿದ್ದಾರೆ. ಇಂದಿನ ಪಂದ್ಯಕ್ಕೆ ಭಾರತ ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಆರಂಭಿಕ ಮಯಾಂಕ್ ಅಗರ್ವಾಲ್ ಸ್ಥಾನದಲ್ಲಿ ಶಬ್ನಂ ಗಿಲ್, ಯಜುವೇಂದ್ರ ಚಾಹಲ್ ಬದಲಿಗೆ ಕುಲದೀಪ್ ಯಾದವ್, ನವದೀಪ್ ಸೈನಿ ಬದಲು ಶ್ರಾದ್ಧೂಲ್ ಠಾಕೂರ್, ಮೊಹಮ್ಮದ್ ಶಮಿ ಬದಲಿಗೆ ಟಿ ನಟರಾಜನ್ ಗೆ ಅವಕಾಶ ನೀಡಿದೆ.