Publish Date: Mon, 11 Jun 2018 (09:41 IST)
Updated Date: Mon, 11 Jun 2018 (09:42 IST)
ಮುಂಬೈ: ವಿರಾಟ್ ಕೊಹ್ಲಿ ದಾಡಿಗೆ ವಿಮೆ ಮಾಡಿಸಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೆಎಲ್ ರಾಹುಲ್ ರ ಟ್ವೀಟ್ ನಿಂದಾಗಿ ವೈರಲ್ ಆಗಿತ್ತು. ಆದರೆ ಈ ಚರ್ಚೆ ಜೋರಾಗುತ್ತಿದ್ದಂತೆ ಸ್ವತಃ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದಾರೆ.
ವಿರಾಟ್ ದಾಡಿಯನ್ನು ಸೂಟು ಬೂಟುಧಾರಿಗಳು ಅಳತೆ ಮಾಡುತ್ತಿರುವ ವಿಡಿಯೋವನ್ನು ಕೆಎಲ್ ರಾಹುಲ್ ಪ್ರಕಟಿಸಿ ವೈರಲ್ ಮಾಡಿದ್ದರು. ಇದರಿಂದಾಗಿ ಅವರ ಗಡ್ಡದ ವಿಮೆ ವಿಷಯ ವೈರಲ್ ಆಯ್ತು.
ಇದೀಗ ಸ್ವತಃ ವಿರಾಟ್ ಅದಕ್ಕೆ ಉತ್ತರ ನೀಡಿದ್ದು, ಇದೆಲ್ಲಾ ಪಿಲಿಪ್ಸ್ ಕಂಪನಿಯ ಹೊಸ ಉತ್ಪನ್ನವೊಂದರ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದು ಬಹಿರಂಗಪಡಿಸಿದ್ದಾರೆ. ಅಂತೂ ಇನ್ನಾದರೂ ಕೊಹ್ಲಿ ಗಡ್ಡದ ವಿಮೆ ವಿಷಯ ಇಲ್ಲಿಗೆ ಅಂತ್ಯ ಕಾಣಬಹುದೇನೋ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.