Publish Date: Thu, 04 Mar 2021 (09:24 IST)
Updated Date: Thu, 04 Mar 2021 (09:25 IST)
ಮುಂಬೈ: ಈ ಬಾರಿ ಐಪಿಎಲ್ ಪಂದ್ಯಗಳು ಪಂಜಾಬ್ ನ ಮೊಹಾಲಿ, ಹೈದರಾಬಾದ್, ಜೈಪುರ ಮೈದಾನಗಳಲ್ಲಿ ನಡೆಸದೇ ಇರಲು ಬಿಸಿಸಿಐ ತೀರ್ಮಾನಿಸಿದೆ.
ಇದು ಪಂಜಾಬ್, ಹೈದರಾಬಾದ್, ರಾಜಸ್ಥಾನ್ ಫ್ರಾಂಚೈಸಿಗಳ ಅಸಮಾಧಾನಕ್ಕೆ ಗುರಿಯಾಗಿದೆ. ಆದರೆ ಮೊಹಾಲಿಯಲ್ಲಿ ಪಂದ್ಯ ನಡೆಸದೇ ಇರಲು ರೈತ ಪ್ರತಿಭಟನೆಯೇ ಕಾರಣ ಎನ್ನಲಾಗುತ್ತಿದೆ.
ಪಂಜಾಬ್ ನಲ್ಲಿ ಕೇಂದ್ರದ ರೈತ ಕಾಯಿದೆ ವಿರೋಧಿಸಿ ಈಗಲೂ ತೀವ್ರ ಪ್ರತಿಭಟನೆ ನಡೆಯುತ್ತಲೇ ಇದೆ. ಹೀಗಾಗಿ ಭದ್ರತಾ ಕಾರಣಗಳಿಂದ ಮೊಹಾಲಿಯಲ್ಲಿ ಪಂದ್ಯ ನಡೆಸದೇ ಇರಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.
ಒಂದು ವೇಳೆ ರೈತ ಪ್ರತಿಭಟನೆ ಕ್ರಿಕೆಟ್ ಅಂಗಣಕ್ಕೂ ಕಾಲಿಟ್ಟರೆ ಐಪಿಎಲ್ ಗೆ ಅದು ಕಪ್ಪುಚುಕ್ಕೆಯಾಗಿ ಪರಿಣಮಿಸಬಹುದು. ಹೀಗಾಗಿ ಭದ್ರತೆ ಕಾರಣಗಳಿಂದ ಮೊಹಾಲಿಯನ್ನು ಬಿಸಿಸಿಐ ಪರಿಗಣಿಸದೇ ಇರಲು ತೀರ್ಮಾನಿಸಿತು ಎನ್ನಲಾಗಿದೆ.