Select Your Language

Notifications

webdunia
webdunia
webdunia
webdunia

ಧೋನಿ-ಯುವರಾಜ್ ಸಿಂಗ್ ಶತಕದಬ್ಬರಕ್ಕೆ ಕೊಚ್ಚಿ ಹೋದ ಇಂಗ್ಲೆಂಡ್

ಧೋನಿ-ಯುವರಾಜ್ ಸಿಂಗ್ ಶತಕದಬ್ಬರಕ್ಕೆ ಕೊಚ್ಚಿ ಹೋದ ಇಂಗ್ಲೆಂಡ್
ಕಟಕ್ , ಗುರುವಾರ, 19 ಜನವರಿ 2017 (17:18 IST)
ಕಟಕ್: ಆರಂಭದಲ್ಲಿ 25 ರನ್ ಗಳಿಸುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗಟ್ಟಿದ ಖುಷಿಯಲ್ಲಿ ಇಂಗ್ಲೆಂಡ್ ತೇಲಾಡುತ್ತಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ವಿಕೆಟ್ ಕಿತ್ತೆವೆಂದು ಕುಣಿದಾಡಿಬಿಟ್ಟಿತು. ಆದರೆ ನಂತರ ಯಾಕಾದರೂ ತೆಗೆದೆವೋ ಎಂದು ಪೇಚಾಡುವಂತಾಯಿತು.


ಧೋನಿ ಮತ್ತು ಯುವರಾಜ್ ಬ್ಯಾಟಿಂಗ್ ಅಬ್ಬರ ಹಾಗಿತ್ತು. ಅಬ್ಬರಕ್ಕಿಂತ ಸ್ಲೋ ಪಾಯಿಸನ್ ರೀತಿ ಅವರು ರನ್ ರಾಶಿ ಹಾಕಿದ್ದು ಗೊತ್ತೇ ಆಗಲಿಲ್ಲ. ಅನುಭವ ಎನ್ನುವುದು ಎಷ್ಟು ಮುಖ್ಯ ಎನ್ನುವುದನ್ನು ಇವರಿಬ್ಬರೂ ಬ್ಯಾಟ್ಸ್ ಮನ್ ಗಳು ಶತಕ ಗಳಿಸಿ ತೋರಿಸಿಕೊಟ್ಟರು.

ಒಂದು ಹಂತದಲ್ಲಿ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ಭಾರತಕ್ಕೆ ಎಚ್ಚರಿಕೆಯ ಇನಿಂಗ್ಸ್ ಕಟ್ಟಿ ಚೇತರಿಕೆ ನೀಡಿದರು. ಮೊತ್ತ ಸುಧಾರಿಸಿದ ಮೇಲೆ ಮುನ್ನುಗ್ಗಿ ಹೊಡೆಯಲು ಪ್ರಾರಂಭಿಸಿದ ಈ ಜೋಡಿ ಒಟ್ಟು ರನ್ ಕಲೆ ಹಾಕಿತು. ಅದರಲ್ಲೂ ಹಲವು ದಿನಗಳ ನಂತರ ತಂಡಕ್ಕೆ ಮರಳಿದ ಯುವರಾಜ್ ರದ್ದೇ ಆಟ. ಧೋನಿಯದ್ದು ಸಾಥ್ ನೀಡುವ ಕೆಲಸವಷ್ಟೇ. ಇದರೊಂದಿಗೆ ಯುವಿ ಏಕದಿನ ಪಂದ್ಯದಲ್ಲಿ ಜೀವನ ಶ್ರೇಷ್ಠ ರನ್ ಗಳಿಸಿದರು.

ಕೆಎಲ್ ರಾಹುಲ್ ಬೇಗನೇ ಔಟಾದರೆ, ಶಿಖರ್ ಧವನ್ ಇಂದಾದರೂ ಆಡಿಯಾರು ಎಂಬ ನಿರೀಕ್ಷೆ ಹುಸಿಗೊಳಿಸಿದರು. ಕೊಹ್ಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಲಿಪ್ ನಲ್ಲಿ ಕ್ಯಾಚಿತ್ತು ಹೊರ ನಡೆದರು.  ಆಗ ಒಂದಾದ ಯುವಿ-ಮಹಿ ಜೋಡಿ ಒಟ್ಟು ರನ್ ಗಳ ಜತೆಯಾಟವಾಡಿದರು. ಯುವರಾಜ್ 127 ಬಾಲ್ ಎದುರಿಸಿ 21 ಬೌಂಡರಿ ಮತ್ತು 3 ಸಿಕ್ಸರ್ 150  ಹೊಡೆದರೆ, ಧೋನಿ 122 ಎಸೆತ ಎದುರಿಸಿ 10 ಬೌಂಡರಿ ಮತ್ತು 6 ಸಿಕ್ಸರ್ ಗಳ ನೆರವಿನಿಂದ 134 ರನ್ ಪೇರಿಸಿದರು.

ಇದರಿಂದಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 381 ರನ್ ಗಳಿಸಿತು. ಇಂಗ್ಲೆಂಡ್ ಗೆಲುವಿಗೆ 382 ರನ್ ಗಳಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಅನುಮಾನಗಳು ಯಾವತ್ತೂ ಸುಳ್ಳಾಗಲ್ಲ!