Select Your Language

Notifications

webdunia
webdunia
webdunia
webdunia

ಎರಡನೇ ಟೆಸ್ಟ್‌ಗೆ ಆ್ಯಂಡರ್‌ಸನ್, ಬೆನ್ ಸ್ಟೋಕ್ಸ್, ರಷೀದ್‌ಗೆ ಇಂಗ್ಲೆಂಡ್ ಬುಲಾವ್

ಎರಡನೇ ಟೆಸ್ಟ್‌ಗೆ ಆ್ಯಂಡರ್‌ಸನ್, ಬೆನ್ ಸ್ಟೋಕ್ಸ್, ರಷೀದ್‌ಗೆ ಇಂಗ್ಲೆಂಡ್ ಬುಲಾವ್
ಲಂಡನ್ , ಮಂಗಳವಾರ, 19 ಜುಲೈ 2016 (12:37 IST)
ಪಾಕಿಸ್ತಾನದ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದಲ್ಲಿ 14 ಆಟಗಾರರ ವಿಸ್ತರಿತ ತಂಡದಲ್ಲಿ  ಪೇಸ್ ಬೌಲರ್ ಜೇಮ್ಸ್ ಆ್ಯಂಡರ್‌ಸನ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಲೆಗ್ ಸ್ಪಿನ್ನರ್ ಅಡಿಲ್ ರಷೀದ್ ಅವರನ್ನು ಇಂಗ್ಲೆಂಡ್ ಸೇರ್ಪಡೆ ಮಾಡಿದೆ.
 
ಇವರು ಮೂವರು ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಭುಜ ಮತ್ತು ಮಂಡಿ ಗಾಯಗಳಿಗೊಳಗಾಗಿದ್ದ ಆಂಡರ್‌ಸನ್ ಮತ್ತು ಸ್ಟೋಕ್ಸ್ ಇಬ್ಬರೂ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
 
 ಏತನ್ಮಧ್ಯೆ ರಷೀದ್ ಸ್ವದೇಶದಲ್ಲಿ ಇನ್ನೂ ಟೆಸ್ಟ್ ಆಡಬೇಕಿದ್ದು, ಅವರನ್ನು ಬ್ಯಾಕ್ ಅಪ್ ಆಗಿ ಅಥವಾ ಮೊಯಿನ್ ಅಲಿಗೆ ಬದಲಿಯಾಗಿ ನೇಮಕ ಮಾಡುವ ಸಾಧ್ಯತೆಯಿದೆ. ಆಫ್ ಬ್ರೇಕ್ ಬೌಲರ್ ಮೊಯಿನ್ ಅಲಿಯನ್ನು ಲಾರ್ಡ್ಸ್‌ನಲ್ಲಿ ಪಾಕ್ ಬ್ಯಾಟ್ಸ್‌ಮನ್ ಕಠಿಣವಾಗಿ ದಂಡಿಸಿದ್ದರು.
 
 ಆಂಡರ್‌ಸನ್ ಮತ್ತು ಸ್ಟೋಕ್ಸ್ ಇಬ್ಬರೂ ಲಂಕಾಶೈರ್ ಮತ್ತು ಡರ್ಹಾಮ್ ನಡುವೆ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದರು. ನಾಟಿಂಗ್‌ಹ್ಯಾಮ್ ಶೈರ್ ವೇಗಿ ಜೇಕ್ ಬಾಲ್ ಲಾರ್ಡ್ಸ್‌ನಲ್ಲಿ ಟೆಸ್ಟ್‌ಗೆ ಚೊಚ್ಚಲ ಪ್ರವೇಶ ಮಾಡಿದ್ದು, ಎಡ ತೊಡೆಯಲ್ಲಿ ಸ್ನಾಯುಬಿಗಿತದಿಂದ ಇಂಗ್ಲೆಂಡ್ ವೈದ್ಯ ತಂಡ ತಪಾಸಣೆ ನಡೆಸುತ್ತಿದೆ.
 
 ಆ್ಯಂಡರ್‌ಸನ್ ಅವರು ಬಲಭುಜದಲ್ಲಿ ಮೂಳೆಮುರಿತದಿಂದ ಚೇತರಿಸಿಕೊಂಡಿದ್ದು, ಪಂದ್ಯದಲ್ಲಿ 23 ಓವರು ಬೌಲ್ ಮಾಡಿ 58 ರನ್ ಕಬಳಿಸಿದ್ದಾರೆ.
 
 ಮೊದಲ ಟೆಸ್ಟ್‌ನಲ್ಲಿ ಆ್ಯಂಡರ್‌ಸನ್ ಅನುಪಸ್ಥಿತಿ ವಿವಾದಾತ್ಮಕವಾಗಿತ್ತು. ಅಲಸ್ಟೈರ್ ಕುಕ್ ಮತ್ತು ಕೋಚ್ ಟ್ರೆವಾರ್ ಬೈಲಿಸ್ ಅವರು ಆ್ಯಂಡರ್‌ಸನ್ ತಂಡದಲ್ಲಿ ಆಡಬೇಕೆಂದು ಬಯಸಿದ್ದರು. ಆದರೆ ಭುಜದ ಗಾಯದ ಹಿನ್ನೆಲೆಯಲ್ಲಿ ಆ್ಯಂಡರ್‌ಸನ್ ಫಿಟ್ನೆಸ್ ಸಾಬೀತು ಮಾಡಬೇಕೆಂದು ಇಂಗ್ಲೆಂಡ್ ಆಯ್ಕೆದಾರರು ನಿರ್ಧರಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಲೆಜೆಂಡ್ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್ ಭೇಟಿ ಮಾಡಿದ ಟೀಂ ಇಂಡಿಯಾ