Select Your Language

Notifications

webdunia
webdunia
webdunia
webdunia

ಸೋಲಿನ ಜತೆ ಇಂಗ್ಲೆಂಡ್ ಕ್ರಿಕೆಟ್ ತಂಕ್ಕೆ ದಂಡದ ಬರೆ

ಸೋಲಿನ ಜತೆ ಇಂಗ್ಲೆಂಡ್ ಕ್ರಿಕೆಟ್ ತಂಕ್ಕೆ  ದಂಡದ ಬರೆ
Cuttack , ಶುಕ್ರವಾರ, 20 ಜನವರಿ 2017 (17:27 IST)
ಕಟಕ್: ಭಾರತದ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯವನ್ನೂ ಸೋತು ಸರಣಿ ಸೋಲಿನ ಹತಾಶೆಯಲ್ಲಿರುವ ಇಂಗ್ಲೆಂಡ್ ದಂಡಕ್ಕೆ ಇದೂ ಸಾಲದೆಬಂತೆ ನಿಧಾನಗತಿಯ ಓವರ್ ಎಸೆದದ್ದಕ್ಕೆ ಮ್ಯಾಚ್ ರೆಫರಿ ದಂಡದ ಬರೆ ಎಳೆದಿದ್ದಾರೆ.
 

ಪರಿಣಾಮ ಪ್ರತೀ ಆಟಗಾರನೂ ಶೇಕಡಾ 10 ರಷ್ಟು ಮತ್ತು ನಾಯಕ ಇಯಾನ್ ಮಾರ್ಗನ್ 20 ಶೇಕಡಾದಷ್ಟು ಪಂದ್ಯದ ಸಂಭಾವನೆಯನ್ನು ದಂಡ ತೆರಬೇಕಾಗಿದೆ.  ತಮ್ಮ ತಂಡದ ಮೇಲಿರುವ ಆರೋಪವನ್ನು ಮಾರ್ಗನ್ ಒಪ್ಪಿಕೊಂಡಿರುವುದರಿಂದ ಯಾವುದೇ ವಿಚಾರಣೆ ಕೈಗೊಳ್ಳಲಾಗಿಲ್ಲ.

ಅಂಪಾಯರ್ ಗಳು ಮತ್ತು ಮ್ಯಾಚ್ ರೆಫರಿಗಳು ಪರಸ್ಪರ ಚರ್ಚಿಸಿ ಇಂಗ್ಲೆಂಡ್ ಗೆ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಟೆಸ್ಟ್ ಸರಣಿ ಗೆದ್ದಿರುವ ಆಂಗ್ಲರು ನಿನ್ನೆಯ ಏಕದಿನ ಪಂದ್ಯದಲ್ಲಿ ಸೋಲುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿನ್ನೂ 0-2 ಅಂತರದಿಂದ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗನಿಗೆ ಕೆಟ್ಟದು ಮಾಡಿದ ಧೋನಿಯನ್ನು ಕ್ಷಮಿಸಿದ್ದೇನೆ ಎಂದ ಯುವರಾಜ್ ಸಿಂಗ್ ತಂದೆ