Select Your Language

Notifications

webdunia
webdunia
webdunia
webdunia

ಇಂದಿನಿಂದ ಐತಿಹಾಸಿಕ 250ನೇ ಟೆಸ್ಟ್

ಇಂದಿನಿಂದ ಐತಿಹಾಸಿಕ 250ನೇ ಟೆಸ್ಟ್
ಈಡನ್ ಗಾರ್ಡನ್ , ಶುಕ್ರವಾರ, 30 ಸೆಪ್ಟಂಬರ್ 2016 (10:48 IST)
ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಅನೇಕ ಸಂಭ್ರಮಗಳಿಗೆ, ಕಹಿ ನೆನಪುಗಳಿಗೆ ಸಾಕ್ಷಿಯಾದ ಮೈದಾನ. 500ನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗುತ್ತಿರುವ ಕೊಹ್ಲಿ ಪಡೆ ಇಂದು ಈಡನ್ ಮೈದಾನದಲ್ಲಿ ಐತಿಹಾಸಿಕ 250ನೇ ತವರು ಟೆಸ್ಟ್ ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ.  
ಈ ದಿನವನ್ನು ಸ್ಮರಣೀಯವಾಗಿಸಲು ಬಂಗಾಲ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.ಪಂದ್ಯ ಆರಂಭವಾಗುವುದಕ್ಕೂ ಮೊದಲು ಎರಡು ತಂಡಗಳಿಗೆ ಸನ್ಮಾನ ಮಾಡಲು ಬಿಸಿಸಿಐ ಮತ್ತು ಬಂಗಾಳ್ ಕ್ರಿಕೆಟ್ ಸಂಸ್ಥೆ ಎಲ್ಲ ರೀತಿಯ ತಯಾರಿ ನಡೆಸಿದೆ.  ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಘಂಟೆ ಬಾರಿಸಿ ಟೆಸ್ಟ್ ಪಂದ್ಯಕ್ಕೆ ಚಾಲನೆ ನೀಡುವಂತೆ ಈಡನ್‌ನಲ್ಲೂ ಘಂಟಾನಾದದೊಂದಿಗೆ 2ನೇ ಟೆಸ್ಟ್‌ಗೆ ಚಾಲನೆ ನೀಡಲಾಗುವುದು.
 
ಅಲ್ಲದೇ ರಾಜ್ಯಾದ್ಯಾಂತ 4000 ವಿಶೇಷ ಚೇತನ  ಮಕ್ಕಳಿಗೆ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಬಂಗಾಳ್ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. 
 
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 1-0 ಇಂದ ಮುಂದಿರುವ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಡುವ ತವಕದಲ್ಲಿದೆ. 
 
ಇಂದಿನ ಬದಲಾವಣೆ ಎಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ನಿರ್ಗಮಿಸಿರುವ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಬದಲು ಹಿರಿಯ ಆಟಗಾರ ಗೌತಮ್ ಗಂಭೀರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಅವರು 11 ಸದಸ್ಯರಲ್ಲಿ ಸ್ಥಾನ ಗಿಟ್ಟಿಸುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ದ್ವೇಷ ಮರೆತು ಗಂಭೀರ್‌ಗೆ ಮಣೆ ಹಾಕುತ್ತಾರಾ ಕೊಹ್ಲಿ?