Select Your Language

Notifications

webdunia
webdunia
webdunia
webdunia

ನನ್ನ ಬಳಿ ಮಂತ್ರದಂಡವಿಲ್ಲ: ಪಾಕ್ ಕ್ರಿಕೆಟಿಗ

ನನ್ನ ಬಳಿ ಮಂತ್ರದಂಡವಿಲ್ಲ: ಪಾಕ್ ಕ್ರಿಕೆಟಿಗ
ಕರಾಚಿ , ಶುಕ್ರವಾರ, 9 ಸೆಪ್ಟಂಬರ್ 2016 (15:03 IST)
ತಮ್ಮ ಕಳಪೆ ಪ್ರದರ್ಶನದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವುದಕ್ಕೆ ಪಾಕಿಸ್ತಾನ ತಂಡದ ಎಡಗೈ ವೇಗಿ ಮೊಹಮ್ಮದ್ ಅಮಿರ್ ತುಸು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಸರಿಸುಮಾರು 6 ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು, ಒಂದೇ ಸಲ ನಿರೀಕ್ಷೆಯ ಮಟ್ಟಕ್ಕೆ ಪ್ರದರ್ಶನ ನೀಡಲು ನನ್ನ ಬಳಿ ಮಂತ್ರಡಂಡವಿಲ್ಲ ಎಂದು ಅವರು ಹೇಳಿದ್ದಾರೆ. 
ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿದ್ದ 24ರ ಹರೆಯದ ಅಮಿರ್ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಐದು ವರ್ಷಗಳ ನಿಷೇಧ ಶಿಕ್ಷೆಯನ್ನು ಮುಗಿಸಿ, ಈ ವರ್ಷದ ಆರಂಭದಲ್ಲಿ ಕೈಗೊಳ್ಳಲಾದ ನ್ಯೂಜಿಲೆಂಡ್ ಪ್ರವಾಸದ ಸಂದರ್ಭದಲ್ಲಿ ತಂಡಕ್ಕೆ ಮರಳಿದ್ದರು. ಇತ್ತೀಚಿಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಸಹ ಅವರು ತಂಡದ ಭಾಗವಾಗಿದ್ದರು.
 
ಇಂಗ್ಲೆಂಡ್‌ನಲ್ಲಿ ಸುದ್ದಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನ್ನಾಡುತ್ತಿದ್ದ ಅವರು, ನಾನು ಆಡಿದಾಗಲೆಲ್ಲ ಬಹಳ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಆದರೆ ವಾಸ್ತವವೇನೆಂದರೆ ನನ್ನ ಬಳಿ ಮಂತ್ರದಂಡವಿಲ್ಲ. ಇದು ಅಂತರಾಷ್ಟ್ರೀಯ ಕ್ರಿಕೆಟ್, ನೀವು ಒಂದು ದಿನದಲ್ಲಿ ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಾಧ್ಯವಿಲ್ಲ ಎಂದಿದ್ದಾರೆ.
 
ಈ ಮಟ್ಟದ ಕ್ರಿಕೆಟ್‌ಗೆ ಬರೊಬ್ಬರಿ 6 ವರ್ಷಗಳ ಬಳಿಕ ಮರಳಿದ್ದೇನೆ. ನಾನು ಅತ್ಯಂತ ಕಠಿಣ ಪರಿಶ್ರಮ ಪಟ್ಟಿದ್ದೇನೆ ಎಂಬುದು ನನಗೆ ಗೊತ್ತು. ನಾನು ಸಮಯವನ್ನು ತೆಗೆದುಕೊಳ್ಳ ಬಯಸುತ್ತೇನೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಜನರಿಂದ ಗುರುತಿಸಲ್ಪಡಲು ನಾನು ಒಂದು ವರ್ಷವನ್ನು ತೆಗೆದುಕೊಂಡಿದ್ದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ ಅಮಿರ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಯುಎಸ್ ಓಪನ್: ಸೆರೆನಾಗೆ ಆಘಾತ, ಮಿಸ್ ಆಯ್ತು ಅಗ್ರ ಶ್ರೇಯಾಂಕ