Dinesh Karthik: ಡಿಕೆ ಬಾಸ್ ಗೆ ಭಾವುಕ ವಿದಾಯ ಹೇಳಿದ ಆರ್ ಸಿಬಿ ಆಟಗಾರರು, ಫ್ಯಾನ್ಸ್

Krishnaveni K
ಗುರುವಾರ, 23 ಮೇ 2024 (09:28 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಕೊನೆಯ ಐಪಿಎಲ್ ಪಂದ್ಯವಾಡಿದ ಆರ್ ಸಿಬಿ ವಿಕೆಟ್ ಕೀಪರ್ ಬ್ಯಾಟಿಗ ದಿನೇಶ್ ಕಾರ್ತಿಕ್ ಗೆ ಭಾವುಕ ವಿದಾಯ ನೀಡಲಾಗಿದೆ. ಕೊನೆಯ ಪಂದ್ಯವಾಡಿದ ಡಿಕೆ ಬಾಸ್ ಗೆ ಅಭಿಮಾನಿಗಳು ಎದ್ದು ನಿಂತು ಗೌರವ ನೀಡಿದ್ದಾರೆ.

2008 ರಲ್ಲಿಯೇ ಅವರ ಐಪಿಎಲ್ ಜೀವನ ಆರಂಭವಾಗಿತ್ತು. 2015 ರಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದರು. ಪಾರ್ಥಿವ್ ಪಟೇಲ್ ಬಳಿಕ ಆರ್ ಸಿಬಿಯ ಖಾಯಂ ವಿಕೆಟ್ ಕೀಪರ್ ಬ್ಯಾಟಿಗರಾದರು. 38 ವರ್ಷದ ದಿನೇಶ್ ಕಾರ್ತಿಕ್ ಅತ್ಯುತ್ತಮ ಫಿನಿಶರ್ ಆಗಿ ಅಭಿಮಾನಿಗಳಿಂದ ಡಿಕೆ ಬಾಸ್ ಎಂದೇ ಕರೆಯಿಸಿಕೊಳ್ಳುತ್ತಿದ್ದರು. ಈ ಐಪಿಎಲ್ ನಲ್ಲೂ ಅವರು ಕೆಲವೊಂದು ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ.

ಇದುವರೆಗೆ ಒಟ್ಟು 257 ಐಪಿಎಲ್ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 4,842 ರನ್ ಗಳಿಸಿದ್ದಾರೆ. ಒಟ್ಟು 22 ಅರ್ಧಶತಕ ಸಿಡಿಸಿರುವ ಡಿಕೆ ಇದುವರೆಗೆ ಶತಕ ಸಿಡಿಸಿಲ್ಲ. ಅಜೇಯ 97 ರನ್ ಗಳಿಸಿರುವುದು ಅವರ ಗರಿಷ್ಠ ರನ್ ದಾಖಲೆಯಾಗಿದೆ. ವಿಕೆಟ್ ಕೀಪರ್ ಆಗಿ 145 ಕ್ಯಾಚ್, 15 ರನೌಟ್ ಮತ್ತು 37 ಸ್ಟಂಪ್ ಔಟ್ ಮಾಡಿದ ದಾಖಲೆ ಅವರದ್ದಾಗಿದೆ.

ಆರ್ ಸಿಬಿಯ ಅವಿಭಾಜ್ಯ ಅಂಗವಾಗಿದ್ದ ದಿನೇಶ್ ಕೊನೆಯ ಪಂದ್ಯವಾಡಿ ಪೆವಿಲಿಯನ್ ಗೆ ಮರಳುವಾಗ ಆರ್ ಸಿಬಿ ಆಟಗಾರರು ಅವರಿಗೆ ಗಾರ್ಡ್ ಆಫ್ ಆನರ್ ಗೌರವ ನೀಡಿ ಬೀಳ್ಕೊಟ್ಟರು. ಪ್ರೇಕ್ಷಕರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಭಾವುಕರಾಗಿ ಕಾರ್ತಿಕ್ ರನ್ನು ತಬ್ಬಿಕೊಂಡರು. ವಿಶೇಷವೆಂದರೆ ರಾಜಸ್ಥಾನ್ ರಾಯಲ್ಸ್ ಆಟಗಾರರೂ ಡಿಕೆಗೆ ಗೌರವ ಸೂಚಿಸಿದರು. ಕೊನೆಯಲ್ಲಿ ಪ್ರೇಕ್ಷಕರತ್ತ ತಮ್ಮ ಗ್ಲೌಸ್ ಎತ್ತಿ ತೋರಿಸುತ್ತಾ ಅವರ ವಂದನೆ ಸ್ವೀಕರಿಸಿ ಭಾವುಕರಾಗಿ ಕೊನೆಯ ಬಾರಿಗೆ ಡಿಕೆ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಭಿಷೇಕ್ ಬಚ್ಚನ್ ಔಟ್ ಮಾಡಿ ಎಂದ ಶೊಯೇಬ್ ಅಖ್ತರ್: ಬಚ್ಚನ್ ಫನ್ನಿ ರಿಯಾಕ್ಷನ್ ನೋಡಿ

Asia Cup Cricket: ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್

ಹೊಡೆದೇ ಹಾಕ್ತೀವಿ: ಏಷ್ಯಾ ಕಪ್ ಫೈನಲ್ ಗೆ ಮುನ್ನ ಭಾರತದ ಬಗ್ಗೆ ಪಾಕಿಸ್ತಾನಿಯರ ವೀರಾವೇಷದ ಮಾತುಗಳು

IND vs SL: ದಸನು ಶಾನಕ ಮಾಡಿದ ಆ ತಪ್ಪಿನಿಂದ ಟೀಂ ಇಂಡಿಯಾಗೆ ಗೆಲುವು

Asia Cup: ಶ್ರೀಲಂಕಾಗೆ ಬಿಗ್ ಟಾರ್ಗೆಟ್ ನೀಡಿದ ಭಾರತ

ಮುಂದಿನ ಸುದ್ದಿ
Show comments