ವಿರಾಟ್ ಕೊಹ್ಲಿ ಬದಲು ಯಶಸ್ವಿ ಜೈಸ್ವಾಲ್ ಓಪನರ್ ಆಗಲಿ

Krishnaveni K
ಮಂಗಳವಾರ, 11 ಜೂನ್ 2024 (13:52 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಕಳೆದ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಈಗ ಯಶಸ್ವಿ ಜೈಸ್ವಾಲ್ ರನ್ನೇ ಓಪನರ್ ಆಗಿ ಕಣಕ್ಕಿಳಿಸಲು ಫ್ಯಾನ್ಸ್ ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ರಾಷ್ಟ್ರೀಯ ತಂಡದ ಪರವೂ ಓಪನರ್ ಆಗಿ ಕಣಕ್ಕಿಳಿದಿದ್ದು ಇದೆ. ಆದರೆ ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್ ರಂತಹ ಪ್ರತಿಭಾವಂತರು ಬಂದ ಬಳಿಕ ಕೊಹ್ಲಿ ಓಪನರ್ ಆಗಿದ್ದು ಕಡಿಮೆ. ಆದರೆ ಈಗ ಟಿ20 ವಿಶ್ವಕಪ್ ನಲ್ಲಿ ರೋಹಿತ್ ಜೊತೆಗೆ ಕೊಹ್ಲಿ ಓಪನಿಂಗ್ ಮಾಡುತ್ತಿದ್ದಾರೆ.

ಆದರೆ ಇದರಿಂದ ಭಾರತಕ್ಕೆ ಹೆಚ್ಚಿನ ಫಲ ದೊರಕಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ ಗಳಿಸಿದ್ದು 1 ಮತ್ತು 4 ರನ್ ಮಾತ್ರ. ಹೀಗಾಗಿ ಕೊಹ್ಲಿಯನ್ನು ಮತ್ತೆ ಅವರ ಮೆಚ್ಚಿನ ಮೂರನೇ ಕ್ರಮಾಂಕಕ್ಕೆ ಕಳುಹಿಸಿ ಸೂರ್ಯಕುಮಾರ್ ಯಾದವ್ ಬದಲು ಯಶಸ್ವಿ ಜೈಸ್ವಾಲ್ ರನ್ನು ತಂಡಕ್ಕೆ ಆಯ್ಕೆ ಮಾಡಿ ಓಪನಿಂಗ್ ಮಾಡಿಸಿ ಎಂದು ಅಭಿಮಾನಿಗಳಿಂದ ಒತ್ತಾಯ ಕೇಳಿಬರುತ್ತಿದೆ.

ಆದರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಈಗ ಕಳೆದ ಎರಡೂ ಪಂದ್ಯಗಳಲ್ಲಿ ರಿಷಬ್ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಅವರನ್ನು ಸದ್ಯಕ್ಕೆ ಆ ಸ್ಥಾನದಿಂದ ಟೀಂ ಮ್ಯಾನೇಜ್ ಮೆಂಟ್ ಕಿತ್ತು ಹಾಕಲ್ಲ. ಹೀಗಿದ್ದಲ್ಲಿ ಸೂರ್ಯಕುಮಾರ್ ಯಾದವ್ ರನ್ನು ಕಿತ್ತು ಹಾಕಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಿ ಎಂಬ ಒತ್ತಾಯಗಳೂ ಕೇಳಿಬರುತ್ತಿವೆ. ಇದನ್ನು ಟೀಂ ಮ್ಯಾನೇಜ್ ಮೆಂಟ್ ಪರಿಗಣಿಸಲಿದೆಯೇ ಎಂದು ನೋಡಬೇಕು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಮುಂದಿನ ಸುದ್ದಿ
Show comments