KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

Krishnaveni K
ಗುರುವಾರ, 22 ಮೇ 2025 (10:58 IST)
ಮುಂಬೈ: ಐಪಿಎಲ್ 2025 ರಲ್ಲಿ ಆರಂಭದಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ ಪ್ಲೇ ಆಫ್ ಗೂ ಅರ್ಹತೆ ಪಡೆಯದೇ ಕೂಟದಿಂದ ಹೊರಬಿದ್ದಿದೆ. ಇದಕ್ಕೆಲ್ಲಾ ಕೆಎಲ್ ರಾಹುಲ್ ವೃತ್ತ ಎಳೆದಿದ್ದೇ ಕಾರಣ ಎಂದು ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ಈ  ಹಿಂದೆ ಆರ್ ಸಿಬಿ ವಿರುದ್ಧ ನಡೆದಿದ್ದ ಪಂದ್ಯವನ್ನು ತಾವೇ ಬ್ಯಾಟಿಂಗ್ ಮಾಡಿ ಗೆಲ್ಲಿಸಿದ ಬಳಿಕ ಡೆಲ್ಲಿ ಬ್ಯಾಟಿಗ ಕೆಎಲ್ ರಾಹುಲ್ ಕಾಂತಾರ ಸಿನಿಮಾ ಸ್ಟೈಲ್ ನಲ್ಲಿ ವೃತ್ತ ಎಳೆದು ಇದು ನನ್ನ ಮೈದಾನ ಎಂದು ಅಬ್ಬರಿಸಿದ್ದರು.

ಅವರ ಈ ಸಂಭ್ರಮಾಚರಣೆ ಆರ್ ಸಿಬಿ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಈ ಪಂದ್ಯದ ಬಳಿಕ ಡೆಲ್ಲಿ ಸೋಲಲು ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳು ಈಗ ಅದೇ ವಿಚಾರವನ್ನಿಟ್ಟುಕೊಂಡು ಡೆಲ್ಲಿ ಮತ್ತು ಕೆಎಲ್ ರಾಹುಲ್ ರನ್ನು ಟ್ರೋಲ್ ಮಾಡುತ್ತಿದ್ದಾರೆ.

ಡೆಲ್ಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ರಾಹುಲ್ ವೃತ್ತ ಎಳೆದರೋ ಅಲ್ಲಿಂದ ಅವನತಿ ಶುರುವಾಯಿತು. ಡೆಲ್ಲಿಯನ್ನು ರಾಹುಲ್ ಅದೇ ವೃತ್ತದೊಳಗೆ ಹಾಕಿ ಮಣ್ಣು ಮುಚ್ಚಿದರು ಎಂದು ಆರ್ ಸಿಬಿ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

ಮುಂದಿನ ಸುದ್ದಿ
Show comments