ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್ ವೆಸ್ಟ್ ಇಂಡೀಸ್‌ನಲ್ಲಿ ಏಕ ದಿನ ಸರಣಿಯ ಉಳಿದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ 36 ರನ್ ಜಯದ ಸಂದರ್ಭದಲ್ಲಿ ಅವರ ಬೆರಳು ಮೂಳೆ ಮುರಿದಿರುವುದರಿಂದ ಮುಂದಿನ ಪಂದ್ಯಗಳಲ್ಲಿ ಅವರು ಆಡುತ್ತಿಲ್ಲ.
ವಾರ್ನರ್ ಅವರು 120 ಎಸೆತಗಳಲ್ಲಿ 109 ರನ್ ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. ಇದು ಅವರ 6ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ. ಆದರೆ ಅವರು ಫೀಲ್ಡಿಂಗ್ ಮಾಡುವಾಗ ಎಡ ತೋರುಬೆರಳಿಗೆ ಪೆಟ್ಟು ಬಿದ್ದಿದ್ದು ಎಕ್ಸರೆ ತೆಗೆಸಿದಾಗ ಮೂಳೆ ಮುರಿದಿರುವುದು ಗೊತ್ತಾಗಿದೆ.
ಮುಂಬರುವ ದಿನಗಳಲ್ಲಿ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂದು ಪರಿಶೀಲಿಸುತ್ತೇನೆ. ಅದು ಬೇಡವಾಗಿದ್ದರೆ ಡೇವಿಡ್ 2 ಮತ್ತು 6 ವಾರಗಳ ನಡುವೆ ಆಟಕ್ಕೆ ಹಿಂತಿರುಗುತ್ತಾರೆ ಎಂದು ಆಸ್ಟ್ರೇಲಿಯಾ ಟೀಂ ವೈದ್ಯ ಜೆಫ್ರಿ ವೆರಾಲ್ ತಿಳಿಸಿದರು.
ಆದರೆ ಜೂನ್ 29ರಂದು ಪಂದ್ಯಾವಳಿಯುವ ಮುಗಿಯುವುದರಿಂದ 29 ವರ್ಷದ ಡೇವಿಡ್ ಪ್ರವಾಸ ಮುಗಿಯುವ ಸಂಭವ ಕಾಣುತ್ತಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ