Webdunia - Bharat's app for daily news and videos

Install App

ಏಕದಿನ ವಿಶ್ವಕಪ್ ಕ್ರಿಕೆಟ್: ಆಫ್ಘನ್-ಆಸೀಸ್ ನಡುವೆ ಇಂದು ಸೆಮಿಫೈನಲ್ ಗಾಗಿ ಕದನ

Webdunia
ಮಂಗಳವಾರ, 7 ನವೆಂಬರ್ 2023 (09:10 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವೆ ಸೆಮಿಫೈನಲ್ ಸ್ಥಾನಕ್ಕಾಗಿ ಮಹತ್ವದ ಕದನ ನಡೆಯಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಅಫ್ಘಾನಿಸ್ತಾನ ಇಂದಿನ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ರೇಸ್ ನಲ್ಲಿ ಉಳಿಯಬಹುದಾಗಿದೆ. ಅಫ್ಘನ್ ತಂಡ ಈ ಬಾರಿ ಕೆಲವು ಅಚ್ಚರಿ ಫಲಿತಾಂಶ ನೀಡಿದ್ದು ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 4 ಗೆಲುವು ಕಂಡಿದೆ. ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ಸೆಮಿಫೈನಲ್ ರೇಸ್ ನಲ್ಲಿ ಇದ್ದರೂ ಇರಬಹುದು! ಜೊತೆಗೆ ನ್ಯೂಜಿಲೆಂಡ್ ಅವಕಾಶವೂ ಕ್ಷೀಣವಾಗಲಿದೆ.

ಇನ್ನು, ಆಸ್ಟ್ರೇಲಿಯಾ ಕೂಡಾ 7 ಪಂದ್ಯಗಳಿಂದ 5 ಗೆಲುವು ಸಂಪಾದಿಸಿದ್ದು, ಸೆಮಿಫೈನಲ್ ರೇಸ್ ನಲ್ಲಿದ್ದರೂ ಇನ್ನೂ ಸ್ಥಾನ ಖಚಿತವಾಗಿಲ್ಲ. ಹೀಗಾಗಿ ಆಸೀಸ್ ಇಂದೂ ಭರ್ಜರಿ ಅಂತರದಲ್ಲಿ ಗೆದ್ದರೆ ಎರಡನೇ ಸ್ಥಾನಕ್ಕೇರಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

ಮುಂದಿನ ಸುದ್ದಿ
Show comments