Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿಶ್ವಕಪ್ ತಂಡದಲ್ಲಿ ಮೂಲೆಗುಂಪಾದ ಕ್ರಿಕೆಟಿಗರಿವರು

webdunia
ಭಾನುವಾರ, 12 ಸೆಪ್ಟಂಬರ್ 2021 (11:35 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಅವಕಾಶದ ನಿರೀಕ್ಷೆಯಲ್ಲಿದ್ದ ಕೆಲವು ಆಟಗಾರರಿಗೆ ನಿರಾಸೆಯಾಗಿದೆ. ಅವರು ಯಾರೆಲ್ಲಾ ಎಂದು ನೋಡೋಣ.


ಶಿಖರ್ ಧವನ್: ಧವನ್ ಹಿರಿತನದ ಆಧಾರದ ಮೇಲೆ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಅವರ ಪ್ರಸಕ್ತ ಫಾರ್ಮ್ ಮತ್ತು ಓಪನಿಂಗ್ ಸ್ಥಾನಕ್ಕೆ ಇದ್ದ ಪೈಪೋಟಿಯಿಂದಾಗಿ ಸ್ಥಾನ ಕಳೆದುಕೊಂಡಿದ್ದಾರೆ.

ಕೃನಾಲ್ ಪಾಂಡ್ಯ: ಸಹೋದರ ಹಾರ್ದಿಕ್ ಪಾಂಡ್ಯ ಜೊತೆಗೆ ಟೀಂ ಇಂಡಿಯಾ ಟಿ20 ಫಾರ್ಮ್ಯಾಟ್ ನಲ್ಲಿ ಸ್ಥಾನ ಪಡೆಯುತ್ತಿದ್ದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಈ ಮೊದಲು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿರಲಿಲ್ಲ. ಹೀಗಾಗಿ ಅವರಿಗೆ ಕೊಕ್ ನೀಡಲಾಗಿದೆ.

ಯಜುವೇಂದ್ರ ಚಾಹಲ್: ಇತ್ತೀಚೆಗಿನ ದಿನಗಳಲ್ಲಿ ಚಾಹಲ್ ಟೀಂ ಇಂಡಿಯಾದಲ್ಲಿ ಪ್ರಭಾವಿ ಎನಿಸಿಕೊಂಡಿರಲಿಲ್ಲ. ಅವರ ಬೌಲಿಂಗ್ ಕೊಂಚ ಕಳೆಗುಂದಿತ್ತು. ಹೀಗಾಗಿ ಕೊನೆಯ ಕ್ಷಣದಲ್ಲಿ ಅವರಿಗೆ ಅವಕಾಶ ಕೈತಪ್ಪಿ ಹೋಯಿತು.

ಪೃಥ್ವಿ ಶಾ: ಆರಂಭಿಕ ಸ್ಥಾನಕ್ಕೆ ಈಗಾಗಲೇ ತಂಡದಲ್ಲಿ ಸಾಕಷ್ಟು ಜನರಿದ್ದಾರೆ. ಹೀಗಾಗಿ ಪ್ರತಿಭೆ, ಫಾರ್ಮ್ ಇದ್ದರೂ ಪೃಥ್ವಿ ಶಾ ಆಯ್ಕೆಯಾಗಲಿಲ್ಲ.

ಇವರಲ್ಲದೆ, ಟಿ. ನಟರಾಜನ್, ಮೊಹಮ್ಮದ್ ಸಿರಾಜ್, ಮನೀಶ್ ಪಾಂಡೆ ಕೂಡಾ ಸ್ಥಾನ ವಂಚಿತರಾಗಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ಸೇರಿಕೊಂಡ ಹಿಟ್ ಮ್ಯಾನ್ ರೋಹಿತ್ ಶರ್ಮಾ