ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ತಂಡದ ಕೋಚ್ ಆಗಿರುವ ಡೆರೆನ್ ಲೆಹ್ಮನ್ ಗುತ್ತಿಗೆಯನ್ನು 2019ರವರೆಗೆ ಮುಂದುವರಿಸಿದೆ. 2013ರ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ 4-0ಯ ಹೀನಾಯ ಸೋಲು ಅನುಭವಿಸಿದ ಬಳಿಕ ಮಿಕಿ ಆರ್ಥರ್ ಅವರನ್ನು ಬದಲಿಸಿ ಲೆಹ್ಮನ್ ಅವರನ್ನು ನೇಮಿಸಲಾಗಿತ್ತು.
ಶ್ರೀಲಂಕಾ ವಿರುದ್ಧ ಒಂದು ಟೆಸ್ಟ್‌ನಲ್ಲಿ ಸೋತರೂ ಒಟ್ಟಾರೆಯಾಗಿ ನಾವು ಚೆನ್ನಾಗಿ ಆಡುತ್ತಿರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ವಾಸ್ತವವಾಗಿ ನೋಡಿದೆ. ನಾನು ಇನ್ನೂ ಕೆಲವು ವರ್ಷಗಳ ಕಾಲ ಉಸ್ತುವಾರಿ ವಹಿಸಿಕೊಂಡು ಉಪಖಂಡದಲ್ಲಿ ಕೆಲವು ಗೆಲುವುಗಳಿಗೆ ಆಶಿಸುವುದು ನಮ್ಮ ಕಾರ್ಯಸೂಚಿಯಲ್ಲಿ ಮೊದಲ ಆದ್ಯತೆಯಾಗಿದೆ ಮತ್ತು ನಾವು ಮುಂಚೆ ಇದ್ದ ರೀತಿಯಲ್ಲಿ ತಂಡವನ್ನು ಕಟ್ಟುತ್ತಿದ್ದೇವೆ ಎಂದು ಲೇಹ್ಮನ್ ಹೇಳಿದರು.
ಈಗ ಭಿನ್ನವಾದ ಕೋಚಿಂಗ್ ತಂಡ ಆಗಮಿಸಿದ್ದು, ಆಟಗಾರರು ಕೂಡ ಚೈತನ್ಯದಿಂದ ಕೂಡಿದ್ದು, ನಾವು ಸವಾಲಿಗೆ ಎದುರುನೋಡುತ್ತಿದ್ದೇವೆ ಎಂದು ಹೇಳಿದರು. ಸ್ಟೀವ್ ಸ್ಮಿತ್ ಮತ್ತು ಅವರ ಬಳಗವು ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 106 ರನ್‌ಗಳಿಂದ ಸೋತಿದ್ದು, ಉಪಖಂಡದಲ್ಲಿ ಆಸ್ಟ್ರೇಲಿಯಾ ಸತತವಾಗಿ ಸೋತಿರುವುದು ಏಳನೇ ಪಂದ್ಯವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.