ಕೊರೋನಾ ಬಳಿಕ ಕ್ರಿಕೆಟ್: ಏನೆಲ್ಲಾ ಬದಲಾವಣೆಯಾಗಿದೆ ಗೊತ್ತಾ?

Webdunia
ಗುರುವಾರ, 9 ಜುಲೈ 2020 (09:00 IST)
ಮುಂಬೈ: ಕೊರೋನಾ ಮಹಾಮಾರಿ ಬಂದ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿದೆ. ಆದರೆ ಕೊರೋನಾ ಕ್ರಿಕೆಟ್ ನಲ್ಲಿ ಯಾವೆಲ್ಲಾ ಬದಲಾವಣೆ ತಂದಿದೆ ಗೊತ್ತಾ?


ಮುಖ್ಯವಾಗಿ ಕೊರೋನಾ ಬಳಿಕ ಕ್ರಿಕೆಟ್ ಗೆ ಐಸಿಸಿ ತನ್ನ ನಿಯಮದಲ್ಲಿ ಕೆಲವು ಬದಲಾವಣೆ ತಂದಿದೆ. ಅದರಲ್ಲಿ ಮುಖ್ಯವಾಗಿ ಚೆಂಡಿಗೆ ಹೊಳಪು ಮೂಡಿಸಲು ಸಲೈವಾ ಬಳಸುವಂತಿಲ್ಲ. ಇದು ವೇಗಿಗಳಿಗೆ ಸವಾಲಿನ ಕೆಲಸವಾಗಲಿದೆ.

ಇನ್ನು, ಪಂದ್ಯದ ನಡುವೆ ಆಡುವ ಬಳಗದಲ್ಲಿರುವ ಆಟಗಾರನಿಗೆ ಕೊರೋನಾ ತಗುಲಿದರೆ ಬದಲಿ ಆಟಗಾರನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಇದುವರೆಗೆ ತಟಸ್ಥ ದೇಶದ ಅಂಪಾಯರ್ ಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇನ್ನು ಮುಂದೆ ಅತಿಥೇಯ ದೇಶದ ಅಂಪಾಯರ್ ಗಳೇ ಕಾರ್ಯನಿರ್ವಹಿಸಲಿದ್ದಾರೆ. ಅನುಭವಿ ಅಂಪಾಯರ್ ಗಳ ಅನುಪಸ್ಥಿತಿಯಲ್ಲಿ ಫಲಿತಾಂಶ ನೀಡುವಾಗ ಹೆಚ್ಚು ಕಮ್ಮಿಯಾದರೂ ಆಟಗಾರರಿಗೆ ತೊಂದರೆಯಾಗದಿರಲೆಂದು ಎರಡರ ಬದಲು ಮೂರು ಬಾರಿ ಔಟ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದಲ್ಲದೆ, ಆಟಗಾರರು ವಿಕೆಟ್ ಬಿದ್ದಾಗ ಸೆಲೆಬ್ರೇಷನ್ ಮಾಡುವಾಗ ಮೈ ಕೈ ಮುಟ್ಟದೇ ಸೆಲೆಬ್ರೇಷನ್ ಮಾಡುವುದು, ಹಸ್ತಾಲಾಘವದ ಬದಲು ಮೊಣಕೈ ತಾಗಿಸುವುದು ಇತ್ಯಾದಿ ಇತರ ಹೊಸ ಪದ್ಧತಿಗಳು ಕ್ರಿಕೆಟ್ ಪಂದ್ಯಗಳಲ್ಲಿ ಕಂಡುಬರಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಿಫಾ ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ರೊನಾಲ್ಡೊ: ಟೀಕಾಕಾರರಿಗೆ ಕಾಲಿನಿಂದಲೇ ದಿಟ್ಟ ಉತ್ತರ

ಕನ್ನಡದ ನಟಿ ಜತೆ ಲವ್‌ನಲ್ಲಿ ಬಿದ್ರಾ ಆರ್‌ಸಿಬಿ ಬ್ಯಾಟರ್ ಬೆಥೆಲ್, ಯಾರಿಗೆ ಗೊತ್ತಾ

Video, ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಹೋದಾಗ ರೋಹಿತ್ ಶರ್ಮಾ ಹೇಗೆ ನಗುತ್ತಾ ಹೋದರು ನೋಡಿ

ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ಪಡೆದು ಕನ್ನಡಿಗನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ Video

ಟಿ20 ಮಹಿಳಾ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಭಾರತ ಸೆಮಿಫೈನಲ್ ಗೇರಲು ಏನು ಮಾಡಬೇಕು

ಮುಂದಿನ ಸುದ್ದಿ
Show comments