Select Your Language

Notifications

webdunia
webdunia
webdunia
webdunia

ಕಿರುಚಾಟವಿಲ್ಲ, ಕಿತ್ತಾಟವಿಲ್ಲ, ವಿಕೆಟ್ ಹಿಂದೆ ಕೂಲ್ ಕೂಲ್ ಕೆಎಲ್ ರಾಹುಲ್

ಕಿರುಚಾಟವಿಲ್ಲ, ಕಿತ್ತಾಟವಿಲ್ಲ, ವಿಕೆಟ್ ಹಿಂದೆ ಕೂಲ್ ಕೂಲ್ ಕೆಎಲ್ ರಾಹುಲ್
ಕೊಲೊಂಬೊ , ಗುರುವಾರ, 14 ಸೆಪ್ಟಂಬರ್ 2023 (09:00 IST)
Photo Courtesy: Twitter
ಕೊಲೊಂಬೊ: ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಕಮ್ ಬ್ಯಾಕ್ ಮಾಡಿದ ಬಳಿಕ ತಂಡದಲ್ಲಿ ಹೊಸ ಎನರ್ಜಿಯೇ ಬಂದಿದೆ ಎಂದರೆ ತಪ್ಪಾಗಲಾರದು.

ಏಷ್ಯಾ ಕಪ್ ನ ಮೂರನೇ ಪಂದ್ಯದಿಂದ ಟೂರ್ನಿಗೆ ಎಂಟ್ರಿಕೊಟ್ಟ ರಾಹುಲ್ ಮೊದಲ ಜವಾಬ್ಧಾರಿಯುತ ಬ್ಯಾಟಿಂಗ್ ಜೊತೆ ಕೀಪರ್ ಆಗಿಯೂ ಗಮನ ಸೆಳೆಯುತ್ತಿದ್ದಾರೆ. ನಾಯಕನಿಗೆ, ಬೌಲರ್ ಗಳಿಗೆ ಸೂಕ್ತ ಸಲಹೆ ನೀಡುತ್ತಾ ತಮ್ಮ ಸ್ಥಾನವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ.

ಸಾಮಾನ್ಯವಾಗಿ ವಿಕೆಟ್ ಕೀಪರ್ ಎಂದರೆ ವಿಕೆಟ್ ಹಿಂದೆ ನಿಂತು ಸದ್ದು-ಗದ್ದಲ ಮಾಡುತ್ತಲೇ ಇರುತ್ತಾರೆ. ಬೌಲರ್ ಗಳನ್ನು ಹುರಿದುಂಬಿಸುವುದು, ಕಿರುಚಾಡುವುದು, ಬ್ಯಾಟಿಗನನ್ನು ಕಿಚಾಯಿಸುವುದು ಇತ್ಯಾದಿ ಮಾಡುತ್ತಾರೆ. ಆದರೆ ರಾಹುಲ್ ವಿಕೆಟ್ ಹಿಂದೆ ಸೈಲೆಂಟ್ ಆಗಿಯೇ ಇದ್ದು ಎದುರಾಳಿ ಬ್ಯಾಟಿಗನ ಚಲನವಲನ ಗಮನಿಸುತ್ತಿರುತ್ತಾರೆ. ಕೂಲ್ ಕೂಲ್ ವರ್ತನೆಯಿಂದ ಧೋನಿ ನೆನಪಿಸುತ್ತಿದ್ದಾರೆ. ರಾಹುಲ್ ಬ್ಯಾಟಿಂಗ್ ನಷ್ಟೇ ಅವರ ಕೀಪಿಂಗ್ ಕಾರ್ಯವೈಖರಿಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮದಿನದ ಸಂಭ್ರಮದಲ್ಲಿ ಸೂರ್ಯಕುಮಾರ್ ಯಾದವ್: ನಾಳೆ ಸಿಗುತ್ತಾ ಗಿಫ್ಟ್?!