ಒಂದೇ ಪಂದ್ಯಕ್ಕೆ ರಿಷಬ್ ಪಂತ್ ಗೆ ಈ ಹಣೆ ಪಟ್ಟಿ ಕಟ್ಟಲು ಶುರು!

Webdunia
ಮಂಗಳವಾರ, 21 ಆಗಸ್ಟ್ 2018 (09:33 IST)
ಟ್ರೆಂಟ್ ಬ್ರಿಡ್ಜ್: ಗೆದ್ದಾಗ ಹೊಗಳಿ ಹೊನ್ನ ಶೂಲಕ್ಕೇರಿಸಿ, ಸೋತಾಗ ಪಾತಾಳಕ್ಕೆ ತಳ್ಳುವುದು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹೊಸದಲ್ಲ. ಇದೀಗ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ವಿಚಾರದಲ್ಲೂ ಇದನ್ನೇ ಮಾಡಲಾಗುತ್ತಿದೆ.

ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ರಿಷಬ್ ಪಂತ್ ರನ್ನು ಈಗಲೇ ಧೋನಿಗೆ ಹೋಲಿಕೆ ಮಾಡಲು ಶುರುಮಾಡಿದ್ದಾರೆ.

ಮೊದಲ ಪಂದ್ಯದಲ್ಲೇ ರಿಷಬ್‍ ಸಿಕ್ಸರ್ ಮೂಲಕ ಚೊಚ್ಚಲ ರನ್ ಗಳಿಸಿ ದಾಖಲೆ ಮಾಡಿದ್ದಲ್ಲದೆ, ಕೀಪಿಂಗ್ ನಲ್ಲೂ ಐದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಇಷ್ಟೇ ಸಾಕಾಯಿತು ನೋಡಿ. ಇದೀಗ ಡೆಲ್ಲಿ ಡ್ಯಾಶರ್ ರಿಷಬ್ ರನ್ನು ಆಧುನಿಕ ಧೋನಿ, ಧೋನಿಯ ಸಕ್ಸಸರ್ ಎಂದೆಲ್ಲಾ ಹೋಲಿಕೆ ಮಾಡಲು ಶುರು ಮಾಡಿದ್ದಾರೆ. ಒಂದೇ ಯಶಸ್ಸಿಗೆ ಇಷ್ಟೊಂದು ಈ ಯುವ ಆಟಗಾರನಿಗೆ ಒತ್ತಡ ತಂದರೆ ಆತ ಮುಂದಿನ ಪಂದ್ಯಗಳಲ್ಲಿ ಆಡುವುದಾದರೂ ಹೇಗೆ? ಗೆದ್ದಾಗ ಹೊಗಳಿ ಅಟ್ಟಕ್ಕೇರಿಸುವ ಬದಲು ಆತನಿಗೂ ಕೊಂಚ ಸಮಯ ಕೊಟ್ಟರೆ ಒಳ್ಳೆಯದಲ್ಲವೇ?

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ

IND vs NZ: ಸಿಕ್ಕ ಅವಕಾಶ ಬಳಸಿಕೊಂಡ ರಿಂಕು ಸಿಂಗ್: ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮಾಡಿದ್ದೇನು

ಎಂ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಾಟಕ್ಕೆ ಕೊನೆಗೂ ಅಧಿಕೃತವಾಗಿ ಸಿಕ್ತು ಗ್ರೀನ್‌ಸಿಗ್ನಲ್

ಇನ್ನೂ ಸ್ಟೇಡಿಯಂ ಖಚಿತಪಡಿಸದ ಆರ್‌ಸಿಬಿ: ವೇಳಾಪಟ್ಟಿ ಸಿದ್ಧಪಡಿಸುತ್ತಿರುವ ಬಿಸಿಸಿಐ ಹೇಳಿದ್ದೇನು

IND vs NZ: ಏಕದಿನ ಸರಣಿ ಕತೆ ಹಾಗಾಯ್ತು, ಇಂದಿನಿಂದ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ

ಮುಂದಿನ ಸುದ್ದಿ
Show comments