Daily Horoscope
✕

IND vs ENG: ರೋಹಿತ್ ಶರ್ಮಾ ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್: ಹೊಗಳಿದ ಕೋಚ್ ದ್ರಾವಿಡ್

Krishnaveni K
ಶನಿವಾರ, 9 ಮಾರ್ಚ್ 2024 (17:00 IST)
Photo Courtesy: Twitter
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ 4-1 ರಿಂದ ಟೆಸ್ಟ್ ಸರಣಿ ಗೆದ್ದ ಬಳಿಕ ಕೋಚ್ ರಾಹುಲ್ ದ್ರಾವಿಡ್  ತಂಡದ ನಾಯಕ ರೋಹಿತ್ ಶರ್ಮಾರನ್ನು ಹಾಡಿಹೊಗಳಿದ್ದಾರೆ. ರೋಹಿತ್ ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಎಂದಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಸೋತ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ನೀರವ ಮೌನವಿತ್ತು. ಆದರೆ ಆಗ ತಂಡವನ್ನು ರಿಲ್ಯಾಕ್ಸ್ ಮಾಡಿದ್ದು, ಸಹಜ ಸ್ಥಿತಿಗೆ ತಂಬ ಕ್ರೆಡಿಟ್ ರೋಹಿತ್ ಗೆ ಸಲ್ಲಬೇಕು. ಅವರ ಸ್ಪೂರ್ತಿಯಿಂದಲೇ ಯುವ ಆಟಗಾರರು ಸರಣಿಯಲ್ಲಿ ಸೋಲಿನಿಂದ ಮೇಲೇಳಲು ಸಹಾಯ ಮಾಡಿತು. ನಾನು ನೋಡಿದ ಹಾಗೆ ರೋಹಿತ್ ಬೆಸ್ಟ್ ಕ್ಯಾಪ್ಟನ್. ಯಾವತ್ತೂ ತಾಳ್ಮೆಯಿಂದ ವರ್ತಿಸುತ್ತಾರೆ ಎಂದು ದ್ರಾವಿಡ್ ಹೊಗಳಿದ್ದಾರೆ.

ಇನ್ನು, ಮೊದಲ ಟೆಸ್ಟ್ ಸೋಲಿನ ಬಳಿಕ ತಂಡಕ್ಕೆ ಯಾರಾದರೂ ಒಬ್ಬರು ಬಿಗ್ ಸ್ಕೋರ್ ಮೂಲಕ ಚೇತರಿಕೆ ನೀಡಬೇಕಿತ್ತು. ಆಗ ರೋಹಿತ್ ತಾವೇ ಮುಂದೆ ನಿಂತು ಜವಾಬ್ಧಾರಿಯುತವಾಗಿ ಅಡಿ ಶತಕ ಗಳಿಸಿದರು. ರೋಹಿತ್ ನಾನು ನೋಡಿದಂತೆ ಬಿಗ್ ಸಿಕ್ಸ್ ಹಿಟ್ಟರ್. ಅವರಂತೆ ಸುಲಭವಾಗಿ ಸಿಕ್ಸರ್ ಗಳನ್ನು ಸಿಡಿಸುವ ಆಟಗಾರರನ್ನು ನಾನು ನೋಡಿಯೇ ಇಲ್ಲ ಎಂದು ದ್ರಾವಿಡ್ ಹೊಗಳಿದ್ದಾರೆ.

ಈ ಸರಣಿಯಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿಯಂತಹ ಅನುಭವಿಗಳ ಅನುಪಸ್ಥಿತಿಯಲ್ಲೂ ಯುವ ಬ್ಯಾಟಿಗರನ್ನು ಕಟ್ಟಿಕೊಂಡು ಇಂಗ್ಲೆಂಡ್ ವಿರುದ್ಧ ಸತತ ನಾಲ್ಕು ಟೆಸ್ಟ್ ಪಂದ್ಯ ಗೆಲುವಿಗೆ ಕಾರಣವಾಗಿದ್ದು ರೋಹಿತ್ ಶರ್ಮಾ ನಾಯಕತ್ವ. ಇದಕ್ಕಾಗಿ ಫ್ಯಾನ್ಸ್ ಅವರನ್ನು ಕೊಂಡಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ನಿವೃತ್ತಿ ಬಗ್ಗೆ ಸಿಎಸ್ ಕೆಗೆ ಧೋನಿ ಹೇಗೆ ಹೇಳಿದ್ರು, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಐಪಿಎಲ್ 2027 ರಿಟೆನ್ಷನ್ ಡೆಡ್‌ಲೈನ್: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದಿಂದ ಹೊರಬೀಳಲಿರುವ ನಾಲ್ವರು ಪ್ರಮುಖ ಆಟಗಾರರು ಇವರೇ ನೋಡಿ

IND vs NZ ಟೆಸ್ಟ್ ಸರಣಿ 2026: ವೇಳಾಪಟ್ಟಿ, ಭಾರತ ತಂಡ, ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ದೀಪಾವಳಿ ದಿನ ನಿಂದಿಸಿದ್ರು, ಅದಕ್ಕೆ ಪಾಕಿಸ್ತಾನಿ ಆಟಗಾರರಿಗೆ ತಕ್ಕ ತಿರುಗೇಟು ಕೊಟ್ಟೆವು: ಕ್ರಿಕೆಟಿಗ ಯಶವೀರ್ ಗೌಡ್ ಸ್ಪೋಟಕ ಹೇಳಿಕೆ Video

ಸತತ ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments