Webdunia - Bharat's app for daily news and videos

Install App

Champions Trophy: ಭಾರತ, ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ಇಂದು: ಲೈವ್ ಎಲ್ಲಿ ವೀಕ್ಷಿಸಬೇಕು

Krishnaveni K
ಶನಿವಾರ, 22 ಫೆಬ್ರವರಿ 2025 (18:18 IST)
ದುಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಈ ಪಂದ್ಯದ ಸಮಯ, ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಮಧ್ಯಾಹ್ನ 2.30ರಿಂದ ಹಗಲು-ರಾತ್ರಿಯಾಗಿ ಪಂದ್ಯ ನಡೆಯಲಿದೆ. ಎರಡೂ ತಂಡಗಳೂ ಈಗಾಗಲೇ ಲೀಗ್ ಹಂತದಲ್ಲಿ ಮೊದಲನೆಯ ಪಂದ್ಯವಾಡಿದೆ. ಭಾರತ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯವನ್ನಾಡಿ ಗೆದ್ದರೆ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

ಹೀಗಾಗಿ ಪಾಕಿಸ್ತಾನಕ್ಕೆ ಇಂದು ಗೆಲ್ಲಲೇಬೇಕಾದ ಒತ್ತಡವಿದೆ. ಒಂದು ವೇಳೆ ಇಂದು ಸೋತರೆ ಪಾಕಿಸ್ತಾನ ಲೀಗ್ ಹಂತದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಅತ್ತ ಭಾರತಕ್ಕೆ ಇಂದು ಗೆದ್ದರೆ ಮುಂದಿನ ಹಾದಿ ಸುಗಮವಾಗಲಿದೆ. ಕಳೆದ ಪಂದ್ಯದಲ್ಲಿ ಪಾಕ್ ಆಟಗಾರರು ಆಡಿದ ರೀತಿ ಗಮನಿಸಿದರೆ ಈ ಪಂದ್ಯದಲ್ಲಿ ಭಾರತವನ್ನು ಗೆಲ್ಲಬೇಕಾದರೆ ತಂಡ ಸಾಕಷ್ಟು ಶ್ರಮವಹಿಸಬೇಕಿದೆ.

ಟೀಂ ಇಂಡಿಯಾದಲ್ಲಿ ಏಳನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ. ಇಬ್ಬರು ಆಲ್ ರೌಂಡರ್ ಗಳಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಆದರೆ ಅತ್ತ ಪಾಕಿಸ್ತಾನಕ್ಕೆ ಆಲ್ ರೌಂಡರ್ ಮತ್ತು ಉತ್ತಮ ಸ್ಪಿನ್ನರ್ ನ ಕೊರತೆ ಕಾಡುತ್ತಿದೆ. ಜೊತೆಗೆ ಫಕರ್ ಜಮಾನ್ ಗಾಯಗೊಂಡಿರುವುದು ಬ್ಯಾಟಿಂಗ್ ಗೆ ದೊಡ್ಡ ಹೊಡೆತ ನೀಡಿದೆ. ಭಾರತ ತಂಡದಲ್ಲಿ ಈ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಟಾಸ್ ಸಮಯ ಮತ್ತು ಲೈವ್ ವಿಕ್ಷಣೆ ವಿವರ
ಈ ಪಂದ್ಯದ ಟಾಸ್ ಸಮಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2 ಗಂಟೆಗೆ. 2.30 ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಜಿಯೋ ಹಾಟ್ ಸ್ಟಾರ್ ಆಪ್ ಮೂಲಕ ಅಥವಾ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಟಿವಿ ವಾಹಿನಿ ಮೂಲಕ ನೇರಪ್ರಸಾರ ವೀಕ್ಷಿಸಬಹುದಾಗಿದೆ.

<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿದ್ದರೂ ಹಾರ್ದಿಕ್ ಪಾಂಡ್ಯಗೆ ಹಿಂಬಡ್ತಿ

Asia Cup: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ಮುಂದಿನ ಸುದ್ದಿ
Show comments