Publish Date: Mon, 15 May 2017 (07:22 IST)
Updated Date: Mon, 15 May 2017 (07:25 IST)
ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನ ಬಹುಮಾನ ಮೊತ್ತವನ್ನು ಐಸಿಸಿ ಹೆಚ್ಚಿಸಿದೆ. 500,000 ಅಮೆರಿಕನ್ ಡಾಲರ್ ನಷ್ಟು ಹೆಚ್ಚಳ ಮಾಡಲಾಗಿದೆ.
ಇದರಿಂದಾಗಿ ಬಹುಮಾನ ಮೊತ್ತ ಒಟ್ಟಾರೆಯಾಗಿ 4.5 ಮಿಲಿಯನ್ ಡಾಲರ್ ನಷ್ಟಾಗಿದೆ. ಇದರಲ್ಲಿ ವಿಜೇತ ತಂಡ 2.2 ಮಿಲಿಯನ್ ಡಾಲರ್ ಪಡೆಯಲಿದೆ. ರನ್ನರ್ ಅಪ್ ತಂಡಕ್ಕೆ 1.1 ಮಿಲಿಯನ್ ಡಾಲರ್ ಲಭಿಸಲಿದೆ.
ಸೆಮಿಫೈನಲ್ ತಲುಪಿದ ತಂಡಗಳಿಗೆ 450, 000 ಅಮೆರಿಕನ್ ಡಾಲರ್, ಗ್ರೂಪ್ ನಲ್ಲಿ ಅಗ್ರ ಮೂರು ಸ್ಥಾನ ಪಡೆದ ತಂಡಗಳಿಗೆ 90,000 ಅಮೆರಿಕನ್ ಡಾಲರ್ ಮತ್ತು ಪ್ರತೀ ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸುವ ತಂಡಗಳಿಗೆ ತಲಾ 60,000 ಅಮೆರಿಕನ್ ಡಾಲರ್ ಹಣ ಸಂದಾಯವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ