ಲಂಡನ್: ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ವೇಗಿಗಳ ಮಾರಕ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ 45 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಮಳೆಗೆ ಆಹುತಿಯಾದ ಪಂದ್ಯದಲ್ಲಿ ಡಕ್ ವರ್ತ್ ಲೂಯಿಸಿ ನಿಯಮದ ಪ್ರಕಾರ ಓವರ್ ಕಡಿತಗೊಳಿಸಲಾಗಿತ್ತು. 8 ಓವರ್ ಎಸೆದ ಶಮಿ 47 ರನ್ ಗಳಿಗೆ 3 ವಿಕೆಟ್ ಕಿತ್ತು ತಮ್ಮ ಸಾಮರ್ಥ್ಯ ಒರೆಗೆ ಹಚ್ಚಿಕೊಂಡರು.
ಭುವನೇಶ್ವರ್ ಕುಮಾರ್ ಕೂಡಾ 6.4 ಓವರ್ ಗಳಿಗೆ ಮೂರು ವಿಕೆಟ್ ಕಿತ್ತು ಗಮನ ಸೆಳೆದರು. ಇದರಿಂದಾಗಿ ನ್ಯೂಜಿಲೆಂಡ್ 38.4 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು. ಉತ್ತರವಾಗಿ ಭಾರತ 26 ಓವರ್ ಬ್ಯಾಟಿಂಗ್ ಮಾಡಿದಾಗ ಮಳೆ ಕಾಡಿತು. ಹೀಗಾಗಿ ಡಕ್ ವರ್ತ್ ಲೂಯಿಸ್ ನಿಯಮದಡಿ ಪಂದ್ಯದ ಫಲಿತಾಂಶ ನಿರ್ಧರಿಸಲಾಯಿತು.
ಭಾರತಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ನಾಯಕ ಕೊಹ್ಲಿ ಫಾರ್ಮ್ ಗೆ ಮರಳಿದ್ದು ದೊಡ್ಡ ರಿಲೀಫ್ ನೀಡಿದೆ. ಕೊಹ್ಲಿ 55 ಬಾಲ್ ಗಳಲ್ಲಿ 52 ರನ್ ಗಳಿಸಿ ಮಿಂಚಿದರು. ವೇಗಿಗಳು ಕೂಡಾ ದೊಡ್ಡ ಸವಾಲುಗಳಿಗೆ ಸಿದ್ಧ ಎಂಬ ಸೂಚನೆ ನೀಡಿದ್ದು, ಟೀಂ ಇಂಡಿಯಾ ಪಾಲಿಗೆ ಶುಭ ಸೂಚನೆಯೇ ಸರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ