Select Your Language

Notifications

webdunia
webdunia
webdunia
webdunia

ಇಂದಿನಿಂದ ಮಿನಿ ವಿಶ್ವಕಪ್ ಕ್ರಿಕೆಟ್: ಏನೆಲ್ಲಾ ಸ್ಪೆಷಲ್?

ಇಂದಿನಿಂದ ಮಿನಿ ವಿಶ್ವಕಪ್ ಕ್ರಿಕೆಟ್: ಏನೆಲ್ಲಾ ಸ್ಪೆಷಲ್?
London , ಗುರುವಾರ, 1 ಜೂನ್ 2017 (09:46 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಗೆ ಅದರದ್ದೇ ಆದ ಘನತೆಯಿದೆ, ಹಿನ್ನಲೆಯಿದೆ. ಈ ಟೂರ್ನಿಯ ಚಾಂಪಿಯನ್ ಆಗುವುದು ಪ್ರತಿಯೊಂದು ಕ್ರಿಕೆಟ್ ಆಡುವ ದೇಶದ ಕನಸು. ಮತ್ತೊಂದು ಮಿನಿ ವಿಶ್ವ ಸಮರಕ್ಕೆ ಇಂದಿನಿಂದ ಇಂಗ್ಲೆಂಡ್ ನಲ್ಲಿ ಚಾಲನೆ ಸಿಗಲಿದೆ.

 
ಹಲವು ಹೊಸತನ, ಹೊಸ ಆಟಗಾರರು, ಹೊಸ ಫೇವರಿಟ್ ತಂಡಗಳೊಂದಿಗೆ ಚಾಂಪಿಯನ್ ಟ್ರೋಫಿ ಕಳೆಗಟ್ಟಲಿದೆ. 18 ದಿನಗಳ ಕಾಲ ನಡೆಯಲಿರುವ ಈ ಸಮರದಲ್ಲಿ ಅಗ್ರ 8 ತಂಡಗಳು ಸೆಣಸಲಿವೆ.  ಇಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಪರಸ್ಪರ ಮುಖಾಮುಖಿಯಾಗಲಿವೆ.

ಆಧುನಿಕ ಟಿ-20 ಜಗತ್ತಿನಲ್ಲಿ ಏಕದಿನ ಪಂದ್ಯಗಳು ಸತ್ವ ಕಳೆದುಕೊಳ್ಳದಂತೆ ಮಾಡಲು ಹಲವು ಹೊಸ ತಂತ್ರಜ್ಞಾನಗಳ ಅಳವಡಿಕೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಶೇಷ. ಬ್ಯಾಟಿನ ಹಿಡಿಕೆಯಲ್ಲಿ ಸೆನ್ಸಾರ್ ಅಳವಡಿಸುವ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ.

ಆ ಮೂಲಕ ಬ್ಯಾಟ್ಸ್ ಮನ್ ಎಷ್ಟು ವೇಗದಲ್ಲಿ ಬ್ಯಾಟ್ ಬೀಸುತ್ತಾನೆ, ಯಾವ ಕೋನಗಳಲ್ಲಿ ಬ್ಯಾಟ್ ತಿರುಗಿಸುತ್ತಾನೆ ಎಂದೆಲ್ಲಾ ತಿಳಿಯಲಿದೆ. ಅದರ ಜತೆಗೆ ಐಪಿಎಲ್ ಪಂದ್ಯಗಳಲ್ಲಿರುವಂತೆ ದ್ರೋಣ್ ಕ್ಯಾಮರಾಗಳನ್ನು ಬಳಸಲಾಗುತ್ತದೆ. ಆ ಮೂಲಕ ಪಿಚ್ ಮಾಹಿತಿಯನ್ನು ಒದಗಿಸಲಾಗುತ್ತದೆ.

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆ ನಂತರ ಆರಂಭವಾಗಲಿದೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು 8 ತಂಡಗಳನ್ನು ಎರಡಾಗಿ ವಿಂಗಡಿಸಲಾಗಿದೆ. ಭಾರತ ಬಿ ಗುಂಪಿನಲ್ಲಿದ್ದು, ಪಾಕಿಸ್ತಾನ, ದ. ಆಫ್ರಿಕಾ ಮತ್ತು ಶ್ರೀಲಂಕಾ ಇತರ ತಂಡಗಳು.

ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್,  ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಸ್ಥಾನ ಪಡೆದಿವೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಪಂದ್ಯಗಳ ನೇರಪ್ರಸಾರವಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ವಿರುದ್ಧ ದಿನಕ್ಕೊಂದು ಆರೋಪ