Publish Date: Fri, 07 Jul 2017 (09:56 IST)
Updated Date: Fri, 07 Jul 2017 (09:58 IST)
ಮುಂಬೈ: ಮುಂಬರುವ ಶ್ರೀಲಂಕಾ ಪ್ರವಾಸದ ವೇಳೆಗೆ ಟೀಂ ಇಂಡಿಯಾಕ್ಕೆ ಹೊಸ ಕೋಚ್ ಆಗಮನವಾಗಲಿದೆ ಎಂದು ಬಿಸಿಸಿಐ ಅಧಿಕಾರಿ ರಾಜೀವ್ ಶುಕ್ಲಾ ಹೇಳಿದ್ದಾರೆ.
ಜುಲೈ 9 ರವರೆಗೆ ಹೊಸ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಯಾಗಿದೆ. ಜುಲೈ 10 ರಂದು ಮುಂಬೈಯಲ್ಲಿ ಸಭೆ ಸೇರಲಿರುವ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರು ಕೋಚ್ ಗಳಿಗೆ ಸಂದರ್ಶನ ನಡೆಸಿ ಅಂತಿಮ ಹೆಸರು ಘೋಷಿಸಲಿದ್ದಾರೆ.
ಇದಾದ ಬಳಿಕೆ ಆಗಸ್ಟ್ ನಲ್ಲಿ ಟೀಂ ಇಂಡಿಯಾ ಶ್ರೀಲಂಕಾಗೆ ಟೆಸ್ಟ್, ಏಕದಿನ ಸರಣಿಗಾಗಿ ಪ್ರವಾಸ ಬೆಳೆಸಲಿದೆ. ಹೀಗಾಗಿ ಈ ಸುದೀರ್ಘ ಸರಣಿಗೆ ಮೊದಲು ಟೀಂ ಇಂಡಿಯಾಕ್ಕೆ ಹೊಸ ಕೋಚ್ ನೇಮಕ ಪ್ರಕ್ರಿಯೆ ಮುಗಿಯಲಿದೆ ಎಂದು ಶುಕ್ಲಾ ತಿಳಿಸಿದ್ದಾರೆ. ಇದೇ ವೇಳೆ ಕೋಚ್ ಹುದ್ದೆ ತ್ಯಜಿಸುವುದು ಅನಿಲ್ ಕುಂಬ್ಳೆಯ ನಿರ್ಧಾರವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ