ನವದೆಹಲಿ: ಗೋವಾ ಕ್ರಿಕೆಟ್ ಸಂಸ್ಥೆಯ ವಂಚನೆ ಪ್ರಕರಣ ಮರುಕಳಿಸದಂತೆ ತಡೆಯಲು ಬಿಸಿಸಿಐ ಶುಕ್ರವಾರ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ಫಂಡ್‌ಗಳ ವಿತರಣೆಗೆ ವಿದ್ಯುನ್ಮಾನ ವಿಧಾನಗಳನ್ನು ಅನುಸರಿಸಲು ನಿರ್ಧರಿಸಿದೆ.
2006-07ರಲ್ಲಿ ಬಿಸಿಸಿಐನಿಂದ 3.13 ಕೋಟಿ ಚೆಕ್ ನಗದೀಕರಿಸಿ ಕ್ರಿಕೆಟ್ ಸಂಸ್ಥೆ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯಲ್ಲಿ ಇರಿಸಿದ ಆರೋಪದ ಮೇಲೆ ಗೋವಾ ಪೊಲೀಸರು ಮೂವರು ಉನ್ನತ ದರ್ಜೆಯ ಜಿಸಿಇ ಅಧಿಕಾರಿಗಳು ಸೇರಿ ಅದರ ಅಧ್ಯಕ್ಷರಾದ ಚೇತನ್ ದೇಸಾಯಿ ಕಾರ್ಯದರ್ಶಿ ವಿನೋದ್ ಪಾಡ್ಕೆ ಮತ್ತು ಲೆಕ್ಕಾಧಿಕಾರಿ ಅಕ್ಬರ್ ಮುಲ್ಲಾರನ್ನು ಬಂಧಿಸಿದ್ದರು. ಇಂತಹ ಘಟನೆಯ ಹಿನ್ನೆಲೆಯಲ್ಲಿ ಬಿಸಿಸಿಐ ರಾಜ್ಯ ಸಂಸ್ಥೆಗಳಿಗೆ ಫಂಡ್ ವಿತರಣೆ ಮಾಡುವಾಗ ಸ್ಕ್ರೂ ಬಿಗಿಮಾಡಲು ನಿರ್ಧರಿಸಿದೆ.
ಮುಂದೆ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐನ ಎಲ್ಲಾ ಪೇಮೆಂಟ್‌ಗಳನ್ನು ನಿಯೋಜಿತ ಖಾತೆಗೆ ವರ್ಗಾಯಿಸಲಾಗುತ್ತದೆ. ಆ ಖಾತೆಯನ್ನು ಪ್ರಸಕ್ತ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ದೃಢೀಕರಿಸಬೇಕು. ಖಾತೆ ತೆರೆದಿರುವ ಬ್ಯಾಂಕ್ ಅದನ್ನು ಪ್ರತಿಪರಿಶೀಲನೆ ಮಾಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.