Webdunia - Bharat's app for daily news and videos

Install App

ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ: ಕುಂಬ್ಳೆ ಮುಂದುವರಿಕೆ ಇಲ್ಲ

Webdunia
ಗುರುವಾರ, 25 ಮೇ 2017 (16:00 IST)
ಚಾಂಪಿಯನ್ಸ್ ಟ್ರೋಫಿ ಅಂತ್ಯದ ಬಳಿಕ ಜೂನ್ 18ಕ್ಕೆ ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಅನಿಲ್ ಕುಂಬ್ಳೆ ಅವಧಿ ಮುಗಿಯಲಿದ್ದು, ಅವರ ಸ್ಥಾನಕ್ಕೆ ನೂತನ ಕೋಚ್ ತರಲು ಬಿಸಿಸಿಐ ಪ್ರಕ್ರಿಯೆಗಳನ್ನ ಆರಂಭಿಸಿದೆ.  ಅನಿಲ್ ಕುಂಬ್ಳೆ ಅವರನ್ನ ಮುಂದುವರಿಸುವ ಉದ್ದೇಶ ಬಿಸಿಸಿಐಗೆ ಇಲ್ಲ ಎಂದು ಮೂಲಗಳು ತಿಳಿಸಿವೆ
 

ಬಿಸಿಸಿಐ ಕೋಚ್ ಸ್ಥಾನಕ್ಕೆ ಅರ್ಜಿಗಳನ್ನ ಆಹ್ವಾನಿಸಿದ್ದು, ಈ ಪ್ರಕ್ರಿಯೆಗೆ ಅನಿಲ್ ಕುಂಭ್ಳೆ ಸಹ ನೇರ ಪ್ರವೇಶ ಪಡೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಕುಂಬ್ಳೆ ಕೋಚ್ ಹುದ್ದೆಗೆ ಬಂದ ಬಳಿಕ ಟೀಮ್ ಇಂಡಿಯಾ ಎಲ್ಲ ಸರಣಿಗಳನ್ನ ಗೆದ್ದಿದೆ. ಆದರೆ, ಅನಿಲ್ ಕುಂಬ್ಳೆ ನಡವಳಿಕೆ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ. ಸುಪ್ರೀಂಕೋರ್ಟ್ ನೇಮಿಸಿರುವ ಬಿಸಿಸಿಐ ಆಡಳಿತ ಮಂಡಳಿಯನ್ನ ಕುಂಬ್ಳೆ ಸಂಪರ್ಕಿಸಿರುವುದು ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

`ಅನಿಲ್ ಕುಂಬ್ಳೆ ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದಾರೆಂದು ನಮಗೆ ಅನ್ನಿಸುತ್ತಿಲ್ಲ. ಅವರ ಅಭಿಪ್ರಾಯ ಹೇಳುವುದಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕೊಂದು ಮಾರ್ಗ ಮತ್ತು ಶಿಷ್ಟಾಚಾರವಿದೆ. ಅದನ್ನ ಎಲ್ಲ ಕಡೆ ಪಾಲಿಸಬೇಕು. ನಿಮ್ಮನ್ನ ನಂಬುವ ಜನರ ಜೊತೆ ವಿಶ್ವಾಸದಿಂದಿರಬೇಕೆಂದು ಬಿಸಿಸಿಐ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಮುಂದಿನ ಸುದ್ದಿ
Show comments