ಮುಂಬೈ: ರಾಜ್ ಕೋಟ್ ನಲ್ಲಿ ನವಂಬರ್ 9 ರಿಂದ ಪ್ರಾರಂಭವಾಗಲಿರುವ ಟೆಸ್ಟ್ ಸರಣಿಯ ಸಂದರ್ಭದಲ್ಲಿ ತಂಡಕ್ಕೆ ಬೇಕಾಗುವ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಭಾರತೀಯ ಕ್ರಿಕೆಟ್ ಮಂಡಳಿ ಮನವಿ ಮಾಡಿದೆ.
ಸುಪ್ರೀಂ ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಲೋಧಾ ಸಮಿತಿಗೆ ಬಿಸಿಸಿಐ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಮುಚ್ಚಳಿಕೆ ಬರೆದುಕೊಡಬೇಕಿತ್ತು. ಆದರೆ ಅದನ್ನು ಮಾಡುವ ಮೊದಲು ಬಿಸಿಸಿಐ ಯಾವುದೇ ವೆಚ್ಚ ಮಾಡುವುದಕ್ಕೂ ನಿರ್ಬಂಧನೆ ಹೇರಲಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಕೊಡಲು ಖರ್ಚು ವೆಚ್ಚಗಳನ್ನು ಮಾಡಬಹುದೇ ಎಂದು ಬಿಸಿಸಿಐ ಲೋಧಾ ಸಮಿತಿಗೆ ಮನವಿ ಮಾಡಿತ್ತು.
ಆದರೆ ಲೋಧಾ ಸಮಿತಿ ಮುಚ್ಚಳಿಕೆ ನೀಡುವ ಆದೇಶ ಪಾಲನೆ ಮಾಡದೆ ಏನೂ ಮಾಡಲಾಗದು ಎಂದು ಖಡಾ ಖಂಡಿತವಾಗಿ ಹೇಳಿದ್ದರಿಂದ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ನಿಯಂತ್ರಣ ಮಂಡಳಿಗೇ ವೆಚ್ಚ ಪೂರೈಸಲು ಮನವಿ ಮಾಡಿದೆ.
ಈ ಕುರಿತು ಇಸಿಬಿ ಗೆ ಪತ್ರ ಬರೆದಿರುವ ಬಿಸಿಸಿಐ ಕೆಲವು ಕಾನೂನು ತೊಡಕುಗಳಿರುವುದರಿಂದ ವೆಚ್ಚ ನಿರ್ವಹಣೆಗೆ ತೊಡಕಾಗಿದೆ ಎಂದು ವಿವರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ